ETV Bharat / state

ವಿನಯ್​ ಕುಲಕರ್ಣಿ ಜನ್ಮದಿನ: ಕೇಕ್​ ಕತ್ತರಿಸಿ ರಕ್ತದಾನ ಮಾಡಿದ ಅಭಿಮಾನಿಗಳು

ಯೋಗೇಶ್​ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿ ಆಗಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ ಸಿಬಿಐ ವಶದಲ್ಲಿದ್ದಾರೆ. ವಿನಯ್ ಕುಲಕರ್ಣಿ ಅವರು ಇಂದು 52ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹೀಗಾಗಿ, ಅವರ ಅನುಪಸ್ಥಿತಿಯಲ್ಲಿ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಇಂದು ಜನ್ಮದಿನ ಆಚರಣೆ ಮಾಡಿದ್ದಾರೆ.

Vinay Kulkarni Birthday celebration
ವಿನಯ್​ ಕುಲಕರ್ಣಿ ಜನ್ಮದಿನ: ಕೇಕ್​ ಕತ್ತರಿಸಿ ರಕ್ತದಾನ ಮಾಡಿದ ಅಭಿಮಾನಿಗಳು
author img

By

Published : Nov 7, 2020, 1:32 PM IST

ಧಾರವಾಡ: ಜನ್ಮದಿನದಂದು ಸಿಬಿಐ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳು ರಕ್ತದಾನ ಮಾಡಿದರು.

ವಿನಯ್​ ಕುಲಕರ್ಣಿ ಜನ್ಮದಿನ: ಕೇಕ್​ ಕತ್ತರಿಸಿ ರಕ್ತದಾನ ಮಾಡಿದ ಅಭಿಮಾನಿಗಳು

ಧಾರವಾಡದ ಗಾಂಧಿಚೌಕನಲ್ಲಿರುವ ಲಯನ್ಸ್ ಜಿಮ್​​ನಲ್ಲಿ‌ ಸರ್ಕಾರಿ ಆಸ್ಪತ್ರೆಯ ರಕ್ತದಾನ ಕೇಂದ್ರದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ರಕ್ತದಾನ ಮಾಡಿ ನಂತರ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಇನ್ನೊಂದು ವಿಶೇಷತೆ ಏನೆಂದರೆ ವಿನಯ್​ ಕುಲಕರ್ಣಿ ಅಭಿಮಾನಿಯೊಬ್ಬ ಅವರ ಭಾವಚಿತ್ರ ಹೊಂದಿರುವ ಮುಖವಾಡ ಧರಿಸಿ ವಿನಯ್​ ಕುಲಕರ್ಣಿ ಅವರನ್ನು ಬಂಧಿಸಿರಬಹುದು. ಆದ್ರೆ ಅವರ ಜೊತೆ ನೂರಾರು ಕಾರ್ಯಕರ್ತರಿದ್ದಾರೆ. ಅವರು ಆದಷ್ಟು ಶೀಘ್ರ ಹೊರಬರಲಿದ್ದಾರೆ ಎಂದರು.

ಸದ್ಯ ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರನ್ನು ವಿಚಾರಣೆಗಾಗಿ ಹುಬ್ಬಳ್ಳಿಗೆ ಕರೆ ತರಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿನ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಮೈದಾನದ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್ ನಿಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆ ಉಂಟಾಗಿದೆ. ಆದರೆ, ಅವರ ಅನುಪಸ್ಥಿತಿಯಲ್ಲಿಯೂ ಕಾಂಗ್ರೆಸ್​ ಕಾರ್ಯಕರ್ತರು ಬರ್ತ್‌ಡೇ ಆಚರಿಸಿದ್ದಾರೆ.

ಹಣ್ಣು - ಹಂಪಲು ವಿತರಣೆ: ಧಾರವಾಡದ ಕಾಂಗ್ರೆಸ್ ಕಾರ್ಯಕರ್ತರು ವಿನಯ್​ ಕುಲಕರ್ಣಿ ಅವರ ಜನ್ಮದಿನದ ‌ನಿಮಿತ್ತ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು - ಹಂಪಲು ವಿತರಿಸಿದ್ದಾರೆ. ಅಪಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಹೊಂದಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅಭಿಮಾನಿಗಳಿಂದ ಹಾಗೂ ಕಾರ್ಯಕರ್ತರಿಂದ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.