ಧಾರವಾಡ: ವ್ಯಕ್ತಿಯೋರ್ವ ತನ್ನ ಮನೆ ಮುಂದೆ ಇರುವ ಮರವೊಂದನ್ನು ಕೆತ್ತುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ್ದು ವ್ಯಕ್ತಿಯ ವಿಡಿಯೋ ಈಗ ವೈರಲ್ ಆಗಿದೆ.
ಗಾಂಧಿ ನಗರದ 4ನೇ ಕ್ರಾಸ್‌ನಲ್ಲಿರುವ ಪೆಲ್ಟೊ ಫಾರಮ್ ಜಾತಿಯ ಮರವನ್ನು ರಮೇಶ ಹುಟಗಿ ಎಂಬಾತ ಕೆತ್ತುತ್ತಿದ್ದು ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಮರ ಕೆತ್ತುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವ್ಯಕ್ತಿಯ ಮೇಲೆ ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲಾಗಿದೆ. ಅಂಟು ಬರುತ್ತೆ ಎಂದುಕೊಂಡು ನಿತ್ಯ ಮರ ಕೆತ್ತುವ ಕೆಲಸ ಮಾಡುತ್ತಿದ್ದನಂತೆ.