ETV Bharat / state

ಹುಬ್ಬಳ್ಳಿ ಗಲಭೆ, ಗುರೂಜಿ ಹತ್ಯೆ..: ಹು-ಧಾರವಾಡದಲ್ಲಿ ನಡೆದ ಘಟನೆಗಳ ಹಿನ್ನೋಟ - ಈಟಿವಿ ಭಾರತ ಕನ್ನಡ

ಹುಬ್ಬಳ್ಳಿ, ಧಾರವಾಡ ಅವಳಿ ಜಿಲ್ಲೆಗಳಲ್ಲಿ ಈ ವರ್ಷ ಹಲವು ಘಟನಾವಳಿಗಳು ನಡೆದಿವೆ. ಇವುಗಳ ಕಿರುನೋಟ ಇಲ್ಲಿದೆ.

various-incidents-happened-in-hubbali-and-dharwad-in-2022
2022ರಲ್ಲಿ ನಡೆದ ಘಟನೆಗಳ ಹಿನ್ನೋಟ : ರಸ್ತೆ ಅಪಘಾತ,ಹುಬ್ಬಳ್ಳಿ ಗಲಭೆ, ಗುರೂಜಿ ಹತ್ಯೆ
author img

By

Published : Dec 29, 2022, 6:19 PM IST

ಹುಬ್ಬಳ್ಳಿ : ಕೋವಿಡ್ ಬಳಿಕ 2022ರಲ್ಲಿ ಜಿಲ್ಲೆ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಹಲವು ಸಿಹಿ ಘಟನೆಗಳಾದರೆ, ಇನ್ನು ಕೆಲವು ಕಹಿ ಘಟನೆಗಳು ನಡೆದಿವೆ. ಹುಬ್ಬಳ್ಳಿ ಗಲಭೆ ಪ್ರಕರಣ, ರಸ್ತೆ ಅಪಘಾತ, ಗುರೂಜಿ ಹತ್ಯೆ, ಧಾರ್ಮಿಕ ಸ್ಥಳಗಳ ತೆರವು ಸೇರಿದಂತೆ ವಿವಿಧ ಘಟನೆಗಳು ನಡೆದಿದ್ದವು.

various-incidents-happened-in-hubbali-and-dharwad-in-2022
ಧಾರವಾಡ ಭೀಕರ ರಸ್ತೆ ಅಪಘಾತ

ಧಾರವಾಡ ಭೀಕರ ರಸ್ತೆ ಅಪಘಾತ, 9 ಮಂದಿ ಸಾವು: ಮೇ 21ರಂದು ಬಾಡ ಗ್ರಾಮದ ಬಳಿ ನಡೆದ ಕ್ರೂಸರ್​ ವಾಹನ​ ಅಪಘಾತದಲ್ಲಿ 9 ಜನ ಮೃತಪಟ್ಟು, 13 ಜನ ಗಾಯಗೊಂಡಿದ್ದರು. ಧಾರವಾಡ ತಾಲ್ಲೂಕಿನ ಬಾಡ ಕ್ರಾಸ್ ಬಳಿ ಕ್ರೂಸರ್​ ವಾಹನ ಮರಕ್ಕೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿತ್ತು.

ಮನಸೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ರಾತ್ರಿ 2ರ ಸುಮಾರಿಗೆ ಬೆನಕನಕಟ್ಟಿಗೆ ಮರಳುತ್ತಿದ್ದ ಕ್ರೂಸರ್​ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದರು. ಮೃತರಲ್ಲಿ ಮೂವರು ಮಕ್ಕಳೂ ಸೇರಿದ್ದರು. ಘಟನೆಯಲ್ಲಿ ಒಟ್ಟು 9 ಜನ ಮೃತಪಟ್ಟಿದ್ದರು.

ರೇವಡಿಹಾಳ ಸೇತುವೆ ಬಳಿ ಬಸ್-ಲಾರಿ ಡಿಕ್ಕಿ, 8 ಮಂದಿ ಸಾವು: ಧಾರವಾಡದ ಬಾಡ ಕ್ರಾಸ್‌ನಲ್ಲಿ ನಡೆದ ಅಪಘಾತದ ನೆನಪು ಮಾಸುವ ಮುನ್ನವೇ, ಹುಬ್ಬಳ್ಳಿ ಹೊರವಲಯದ ಬೈಪಾಸ್ ರಸ್ತೆಯ ರೇವಡಿಹಾಳ ಸೇತುವೆ ಬಳಿ ಮೇ 24 ರ ಸೋಮವಾರ ಮಧ್ಯರಾತ್ರಿ ಬಸ್ ಮತ್ತು ಲಾರಿ ನಡುವೆ ಮತ್ತೊಂದು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ 8 ಮಂದಿ ಮೃತಪಟ್ಟು, 27 ಮಂದಿ ಗಾಯಗೊಂಡಿದ್ದರು.

ಬೆಂಗಳೂರಿನ ನ್ಯಾಷನಲ್‌ ಟ್ರಾವೆಲ್ಸ್‌ಗೆ ಸೇರಿದ ಬಸ್ 30 ಪ್ರಯಾಣಿಕರೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರದ ಇಚಲಕರಂಜಿಯಿಂದ ಬೆಂಗಳೂರಿಗೆ ಹೊರಟಿತ್ತು. ಕಿರಿದಾದ ಬೈಪಾಸ್‌ ರಸ್ತೆಯಲ್ಲಿ ಬಸ್‌ ಚಾಲಕ ಮುಂದೆ ಹೋಗುತ್ತಿದ್ದ ಟ್ರಾಕ್ಟರನ್ನು ಹಿಂದಿಕ್ಕಲು ಹೋಗಿ ಬಸ್ ಅನ್ನು ಬಲಕ್ಕೆ ತಿರುಗಿಸಿದ್ದಾನೆ. ಆಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.

ಹುಬ್ಬಳ್ಳಿ ಗಲಭೆ ಪ್ರಕರಣ

ಹುಬ್ಬಳ್ಳಿ ಗಲಭೆ ಪ್ರಕರಣ: ಏ.16 ರಂದು ಯುವಕನೊಬ್ಬ ವಾಟ್ಸಾಪ್​ನಲ್ಲಿ ಪ್ರಚೋದನಾತ್ಮಕ ಪೋಸ್ಟ್​ ಮಾಡಿದ್ದ. ಇದನ್ನು ಖಂಡಿಸಿ ಪ್ರತಿಭಟನಾಕಾರರು ಹಳೇ ಹುಬ್ಬಳ್ಳಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಹಳೇ ಹುಬ್ಬಳ್ಳಿಯಲ್ಲಿ ಗಲಭೆ ಉಂಟಾಗಿತ್ತು. ಆಗ ಪ್ರತಿಭಟನಾಕಾರರು ಹಿಂದೂ ದೇವಾಲಯ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗಿದ್ದವು. ಬಳಿಕ ಹುಬ್ಬಳ್ಳಿ ಒಂದು ವಾರ ಬೂದಿಮುಚ್ಚಿದ ಕೆಂಡದಂತಾಗಿತ್ತು. ಪೊಲೀಸ್ ಇಲಾಖೆ ಗಲಭೆಯ ಸಂಬಂಧ ಎಂಟು ತಂಡಗಳ ಮೂಲಕ ತೀವ್ರ ಕಾರ್ಯಾಚರಣೆ ನಡೆಸಿದ್ದವು. ನಿತ್ಯವೂ ಹಲವು ಗಲಭೆಕೋರರನ್ನು ಬಂಧಿಸಿ ಒಟ್ಟು, ಏ.27ರಂದು ಬಂಧಿತ 8 ಜನ ಸೇರಿ ಒಟ್ಟು 154 ಜನರನ್ನ ಬಂಧನ ಮಾಡಿದ್ದರು.

ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ

ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ: ಸರಳವಾಸ್ತುವಿನಿಂದ ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದ ಚಂದ್ರಶೇಖರ ಗುರೂಜಿ ಹತ್ಯೆ ರಾಜ್ಯದಲ್ಲಿ ಸಂಚಲನವನ್ನುಂಟು ಮಾಡಿತ್ತು. ಜುಲೈ 5ರಂದು ಇಲ್ಲಿನ ಉಣಕಲ್‌ ಶ್ರೀನಗರ ಕ್ರಾಸ್‌ ಬಳಿಯಿರುವ ಖಾಸಗಿ ಹೋಟೆಲ್‌ನಲ್ಲಿ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಎಂಬವರು ಗುರೂಜಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಇಬ್ಬರು ಗುರೂಜಿ ಬಳಿಯೇ ಕೆಲಸಕ್ಕೆ ಇದ್ದು, ಅವರ ಆಪ್ತರಾಗಿದ್ದರು. ಆದಾಗ್ಯೂ ಹಾಡಹಗಲೇ ಖಾಸಗಿ ಹೋಟೆಲ್‌ನ ಲಾಂಜ್‌ನಲ್ಲಿ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದರು.

46 ಬಾರಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ ಆರೋಪಿಗಳ ಪತ್ತೆಗಾಗಿ ಪೊಲೀಸ್‌ ಕಮಿಷನರ್‌ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಘಟನೆ ನಡೆದ 4 ಗಂಟೆಯ ಒಳಗಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣ ಸಂಬಂಧ 800 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

ಈದ್ಗಾ ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ: ಸಾಕಷ್ಟು ಪರ–ವಿರೋಧಗಳ ನಡುವೆಯೇ ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿತ್ತು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ರಚನೆಯಾದ ಸದನ ಸಮಿತಿ ವರದಿಯಾಧರಿಸಿ ಕಾನೂನು ಸಲಹೆ ಪಡೆದ ಮೇಯರ್‌ ಈರೇಶ ಅಂಚಟಗೇರಿ, ಮೂರು ದಿನಗಳ ಗಣೇಶೋತ್ಸವಕ್ಕೆ ಪಾಲಿಕೆ ಅವಕಾಶ ನೀಡುತ್ತಿದೆ ಎಂದು ಘೋಷಣೆ ಮಾಡಿದ್ದರು.

ಈ ಐತಿಹಾಸಿಕ ನಿರ್ಣಯದಿಂದ ವಿವಿಧ ಗಣೇಶೋತ್ಸವ ಸಮಿತಿ ಮತ್ತು ಹಿಂದೂ ಸಂಘಟನೆಗಳ ಸದಸ್ಯರು ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇದನ್ನು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಕೋರ್ಟ್ ಮೊರೆ ಹೋಗಿತ್ತು. ರಾಜ್ಯ ಹೈಕೋರ್ಟ್ ರಾತ್ರೋರಾತ್ರಿ ಗಣೇಶ ಪ್ರತಿಷ್ಟಾಪನೆಗೆ ಅಸ್ತು ಎಂದಿತ್ತು. ಇದಾದ ಬಳಿಕ ಹಲವು ಸಂಘಟನೆಗಳು ಕೂಡ ಜಯಂತಿ, ಸಭೆ ಸಮಾರಂಭ ಮಾಡಲು ಪಾಲಿಕೆಗೆ ಮನವಿ ಸಲ್ಲಿಸಿದವು. ಆಗ ಮಹಾನಗರ ಪಾಲಿಕೆ ಕನಕ ಜಯಂತಿ ಹಾಗೂ ಟಿಪ್ಪು ಜಯಂತಿಗೆ ಅನುಮತಿ‌ ನೀಡುವ ಮೂಲಕ ಸೌಹಾರ್ದತೆಗೆ ನಾಂದಿ ಹಾಡಿತ್ತು.

ಬಿಆರ್​ಟಿಎಸ್ ಕಾಮಗಾರಿಗಾಗಿ ಮಸೀದಿ ತೆರವು

ಬಿಆರ್​ಟಿಎಸ್ ಕಾಮಗಾರಿಗಾಗಿ ಮಸೀದಿ ತೆರವು: ಬಿ.ಆರ್.ಟಿ.ಎಸ್ ಯೋಜನೆ ಅನುಷ್ಠಾನಕ್ಕಾಗಿ ಕೆಲ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ಅವಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೈರಿದೇವರಕೊಪ್ಪದ ಸೈಯದ್ ಮೆಹಮೂದ ಶಾ ಖಾದ್ರಿ ದರ್ಗಾ ತೆರವು ಮಾಡಲಾಯಿತು. ದರ್ಗಾ ಕಮಿಟಿಯವರಿಗೆ 2020ರ ಮಾರ್ಚ್​ಗೆ ಅಂತಿಮ ನೋಟಿಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕಮಿಟಿಯವರು ನ್ಯಾಯಾಲಯ ಮೆಟ್ಟಿಲೇರಿದ್ದರು. ಇದೇ ಡಿ.16ರಂದು ಕಮಿಟಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. 44 ಮೀ. ರಸ್ತೆ ನಿರ್ಮಿಸಲು ಸಿದ್ದರಾಗಿ ಎಂದು ಆದೇಶಿಸಿತ್ತು. ಹೀಗಾಗಿ ಜಿಲ್ಲಾಡಳಿತ ಹಾಗೂ ಬಿ ಆರ್ ಟಿಎಸ್ ಜಂಟಿ ಕಾರ್ಯಾಚರಣೆ ನಡೆಸಿ ಮಸೀದಿ ತೆರವುಗೊಳಿಸಿ ಗೋರಿ ಸ್ಥಳಾಂತರ ಮಾಡಿತ್ತು.

ಕ್ರೈಂ ಪ್ರಕರಣಗಳು ಹೆಚ್ಚಳ: ಡಿಸೆಂಬರ್ 29ರ ವರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿ ಕಳ್ಳತನ, ಚಾಕು ಇರಿತ, ಹೊಡೆದಾಟ, ಜಗಳ, ಕಾಣೆ, ಚೆಕ್ ಬೌನ್ಸ್ ಸೇರಿದಂತೆ ವಿವಿಧ ಪ್ರಕರಣಗಳು ನಡೆದಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಪಿಎಂಸಿ-ನವನಗರ ಪೊಲೀಸ್ ಠಾಣೆಯಲ್ಲಿ 108, ಅಶೋಕನಗರ 82, ಬೆಂಡಿಗೇರಿ 162, ಸಿಇಎನ್ ಕ್ರೈಂ 351, ಘಂಟಿಕೇರಿ 62, ಗೋಕುಲ ರೋಡ್ 217, ಉಪನಗರ 196, ಶಹರ 152, ಕಮರಿಪೇಟೆ 50, ಕಸಬಾಪೇಟೆ 138, ಕೇಶ್ವಾಪುರ 154, ಹಳೇಹುಬ್ಬಳ್ಳಿ 220, ವಿದ್ಯಾನಗರ 158, ಮಹಿಳಾ ಪೊಲೀಸ್ ಠಾಣೆ 95 ಹಾಗೂ ಪೂರ್ವ ಸಂಚಾರ ಠಾಣೆ 81, ಉತ್ತರ ಸಂಚಾರ 158, ದಕ್ಷಿಣ ಸಂಚಾರ ಠಾಣೆಯಲ್ಲಿ 117 ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ 316, ರೈಲ್ವೆ ಪೊಲೀಸ್ ಠಾಣೆಯಲ್ಲಿ 151 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ದಾಖಲಾತಿ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಇದನ್ನೂ ಓದಿ: ವರ್ಷದ ಹಿನ್ನೋಟ: ದ.ಕನ್ನಡದಲ್ಲಿ ಧರ್ಮ ಸಂಘರ್ಷ, ಹಿಜಾಬ್‌, ನೈತಿಕ ಪೊಲೀಸ್‌ಗಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.