ETV Bharat / state

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲೇ ವ್ಯಾಕ್ಸಿನ್ ಕೊರತೆ.. ಅಧಿಕಾರಿಗಳ ವಿರುದ್ಧ ಜನಾಕ್ರೋಶ.. - ಹುಬ್ಬಳ್ಳಿಯಲ್ಲಿ ವ್ಯಾಕ್ಸಿನ್ ಕೊರತೆ

ಗಂಟೆಗಟ್ಟಲೇ ಸಾಲಿನಲ್ಲಿ ನಿಂತರೂ ಜನರಿಗೆ ಲಸಿಕೆ ಸಿಗುತ್ತಿಲ್ಲ. 200 ಜನರಿಗೆ ಮಾತ್ರ ಲಸಿಕೆ ನೀಡಲು ಕಿಮ್ಸ್ ಮುಂದಾಗಿದೆ. ಈ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಎಡವಟ್ಟು ಮಾಡಿದೆ..

ಹುಬ್ಬಳ್ಳಿಯಲ್ಲಿ ವ್ಯಾಕ್ಸಿನ್ ಕೊರತೆ
ಹುಬ್ಬಳ್ಳಿಯಲ್ಲಿ ವ್ಯಾಕ್ಸಿನ್ ಕೊರತೆ
author img

By

Published : Jun 25, 2021, 3:32 PM IST

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕೋವಿಡ್​​ನಿಂದ ಜನತೆ ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಈವರೆಗೆ ಆಕ್ಸಿಜನ್, ವೆಂಟಿಲೇಟರ್, ಬೆಡ್ ಸಮಸ್ಯೆ ಎದುರಿಸಿದ್ದ ಜನರಿಗೆ ಈಗ ವ್ಯಾಕ್ಸಿನ್ ಕೊರತೆ ಉಂಟಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿದೆ. ಜನರು ಸಾಲಿನಲ್ಲಿ ನಿಂತು ಲಸಿಕೆಗಾಗಿ ಕಾಯುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ..

ಗಂಟೆಗಟ್ಟಲೇ ಸಾಲಿನಲ್ಲಿ ನಿಂತರೂ ಜನರಿಗೆ ಲಸಿಕೆ ಸಿಗುತ್ತಿಲ್ಲ. 200 ಜನರಿಗೆ ಮಾತ್ರ ಲಸಿಕೆ ನೀಡಲು ಕಿಮ್ಸ್ ಮುಂದಾಗಿದೆ. ಈ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಎಡವಟ್ಟು ಮಾಡಿದೆ. ಆರೋಗ್ಯಾಧಿಕಾರಿಗಳು ಮೊದಲೇ ಈ ಬಗ್ಗೆ ನಮಗೆ ತಿಳಿಸಿದ್ದರೆ, ನಾವು ಇಲ್ಲಿಯವರೆಗೆ ಬರುತ್ತಿರಲಿಲ್ಲ ಎಂದು ಜನತೆ ಆರೋಗ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಜಿಲ್ಲೆಯಾದ್ಯಂತ ಈವರೆಗೂ ನೀಡಲಾದ ವ್ಯಾಕ್ಸಿನ್ ವಿವರ..

21-06-2021ರಂದು ಮೊದಲನೆ ಡೋಸ್-26,456
ಎರಡನೇ ಡೋಸ್- 1,707
ಒಟ್ಟು- 28,163 ಜನರಿಗೆ ವ್ಯಾಕ್ಸಿನೇಷನ್

22-06-21ರಂದು ‌ಮೊದಲನೆ ಡೋಸ್- 22,305
ಎರಡನೇ ಡೋಸ್ -1,562
ಒಟ್ಟು - 23,867

23-06-21ರಂದು ಮೊದಲನೆ ಡೋಸ್-14,364
ಎರಡನೇ ಡೋಸ್-639
ಒಟ್ಟು-15003
ಧಾರವಾಡ ಜಿಲ್ಲೆಯಲ್ಲಿ ಜೂನ್ 23ರವರೆಗೆ 3,99,182 ಜನರು ಮೊದಲನೆಯ ಡೋಸ್, 82,723 ಜನರು ಎರಡನೆಯ ಡೋಸ್ ಪಡೆದಿದ್ದಾರೆ. ಒಟ್ಟು 4,81,905 ಜನರು ವ್ಯಾಕ್ಸಿನ್ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.