ETV Bharat / state

ರಾಜ್ಯದ 28 ಕ್ಷೇತ್ರಗಳಲ್ಲೂ ಯುಪಿಪಿ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಉಪೇಂದ್ರ - news kannada

ನಟ ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲೂ ಸ್ಪರ್ಧಿಸುವ ಮೂಲಕ ಮತ್ತೊಂದು ಅಗ್ನಿ ಪರೀಕ್ಷೆಗೆ ತಯಾರಿ ನಡೆಸಿದೆ.

ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ಸಂಸ್ಥಾಪಕ ಚಿತ್ರನಟ ಉಪೇಂದ್ರ
author img

By

Published : Feb 2, 2019, 2:01 PM IST

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ಸಂಸ್ಥಾಪಕ ಚಿತ್ರನಟ ಉಪೇಂದ್ರ ಹೇಳಿದರು.

  • AS A “CITIZEN” MY QUESTIONNAIRE FOR M.P CANDIDATE | ನಾನೊಬ್ಬ “ಪ್ರಜೆ”ಯಾಗಿ ಸಂಸದ ಅಭ್ಯರ್ಥಿಗೆ ಕೇಳುವ ಪ್ರಶ್ನಾವಳಿಗಳು | Replay using below given link | ಕೆಳಗಿನ ಲಿಂಕ್ ಬಳಸಿ ನಿಮ್ಮ ವಿವರಗಳನ್ನು ಕಳುಹಿಸಿಕೊಡಿ | https://t.co/qj3EQ9FMb2 pic.twitter.com/fceIUKKmSQ

    — Upendra (@nimmaupendra) January 30, 2019 " class="align-text-top noRightClick twitterSection" data=" ">
undefined

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲೇ ನಾವು ಸ್ಪರ್ಧಿಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿಲ್ಲ. ಇದೀಗ ನಮ್ಮದೇ ಹೊಸ ಪಕ್ಷದಿಂದ ಸ್ಪರ್ಧೆ ಮಾಡುತ್ತೇವೆ. ನಾವು ಈ ಬಾರಿ ಐದು ವಿಚಾರಗಳಿಂದ ಚುನಾವಣೆಗೆ ಹೋಗುತ್ತಿದ್ದೇವೆ.

ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ಸಂಸ್ಥಾಪಕ ಚಿತ್ರನಟ ಉಪೇಂದ್ರ
undefined

ಕರಪ್ಷನ್, ಸೆಲೆಕ್ಷನ್, ಎಲೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಂಬ ವಿಚಾರದಡಿ ನಾವು ಚುನಾವಣೆಗೆ ಹೊಗುತ್ತಿದ್ದೇವೆ. ಪ್ರಜೆಗಳೇ ಈ ಐದು ವಿಚಾರಗಳನ್ನ ನಿರ್ಧಾರ ಮಾಡುತ್ತಾರೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನ ಪ್ರಜೆಗಳೇ ಸೆಲೆಕ್ಷನ್ ಮಾಡ್ತಾರೆ. ನಮ್ಮ ಪಕ್ಷದ ಪ್ರಣಾಳಿಕೆ ಎರಡೂ ರೀತಿಯಲ್ಲಿ ಇರುತ್ತೆ‌ ಎಂದರು.

http://10.10.50.85:6060/reg-lowres/02-February-2019/kn_hbl_020219_upp-upendra_gaddad1_0202digital_00401_515.mp4
undefined

ಟೆಕ್ನಾಲಜಿ ಮುಂದುವರೆದಿದೆ, ಜನ ಬದಲಾಗ್ತಾರೆ ಎನ್ನೋ ನಂಬಿಕೆ ಇದೆ. ಡಿಜಿಟಲ್ ಆಗಿ ಅಂತ ಜನರಿಗೆ ಹೇಳುತ್ತಾರೆ. ಆದರೆ ನಮ್ಮ ಲೀಡರ್​ಗಳೇ ಪೇಪರ್ ಹಿಡಿದುಕೊಂಡು ಪಾರ್ಲಿಮೆಂಟ್​ನಲ್ಲಿ‌ ಮಾತನಾಡುತ್ತಾರೆ. ಯಾಕೆ ಪಿಪಿಟಿ ತಮ್ಮ ಕ್ಷೇತ್ರದ ಬಗ್ಗೆ ಲೈವ್ ಮಾಡಿ ಮಾತನಾಡೋಕ್ಕಾಗಲ್ಲ ಎಂದು ವಾಗ್ದಾಳಿ ನಡೆಸಿದರು.

undefined

ಸಂಘಗಳನ್ನು ಮಾಡಿ ಅಲ್ಲೊಬ್ಬ ನಾಯಕನನ್ನು ಮಾಡಿ ಇಂತಹ ಅವ್ಯವಸ್ಥೆ ಸೃಷ್ಟಿ ಮಾಡುವಂತ ಪಕ್ಷ ಇದಲ್ಲ. ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತ ಮೌಢ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಹಿನ್ನೆಲೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಜಾರಿಗೆ ಬಂದಿದೆ. ಪ್ರಜಾಕೀಯ ಪಕ್ಷದ ಗೆಲುವು ಅದು ನಿಜವಾಗಿಯೂ ಜನರ ಗೆಲುವು. ಅಧಿಕಾರ ಐದು ವರ್ಷಗಳ ಕಾಲ ಒಬ್ಬ ವ್ಯಕ್ತಿಯ ಕೈಯಲ್ಲಿರುವಂತದ್ದನ್ನು ಧಿಕ್ಕರಿಸುವ ಮೂಲಕ ಅಧಿಕಾರ ಜನಸಾಮಾನ್ಯರ ಕೈಯಲ್ಲಿರಬೇಕು ಎಂಬುದೇ ಪಕ್ಷದ ಆಶಯವಾಗಿದೆ ಎಂದರು.

ಪ್ರಜಾಕೀಯ ಪಕ್ಷ ವೈಯಕ್ತಿಕ ಸ್ವಾರ್ಥಕ್ಕಾಗಿ ಹುಟ್ಟಿಕೊಂಡಿರುವಂತ ಪಕ್ಷವಲ್ಲ. ಇದು ದೇಶದ ಮೇಲಿನ ಪ್ರೀತಿಯಿಂದ ಹುಟ್ಟಿಕೊಂಡಿದೆ. ಅದ್ಭುತ ಬದಲಾವಣೆಗೆ ಎಲ್ಲರೂ ಕೈ ಜೋಡಿಸಬೇಕು. ಈಗಾಗಲೇ 15 ರಿಂದ 18 ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇನ್ನುಳಿದ ಅಭ್ಯರ್ಥಿಗಳನ್ನು ಕೆಲವೇ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದರು. ಜಾತಿ ವ್ಯವಸ್ಥೆ, ಹಣದ ಆಮಿಷದಿಂದ ಇಲ್ಲಿ ಯಾವುದೇ ಅಧಿಕಾರ ಪಡೆಯುವಂತ ಪ್ರಕ್ರಿಯೆ ನಡೆಯುವುದಿಲ್ಲ ಅವರು ಮಾಹಿತಿ ನೀಡಿದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.