ಧಾರವಾಡ: ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಜಖಂ ಮಾಡಿರುವ ಘಟನೆ ನಗರದ ಸರಸ್ವತಿಪುರ ಬಡಾವಣೆಯಲ್ಲಿ ನಡೆದಿದೆ.
ನಗರದ ಲಕ್ಷ್ಮಿಸಿಂಗನಕೆರೆ ಬಡಾವಣೆಯ ಮಂಜುನಾಥ್ ಎಂಬುವವರಿಗೆ ಸೇರಿರುವ ಕಾರು ಇದಾಗಿದ್ದು, ಕಾರಿನಲ್ಲಿನ ಪೆಟ್ರೋಲ್ ಮುಗಿದಿದ್ದರಿಂದ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಮಂಜುನಾಥ್ ಪೆಟ್ರೋಲ್ ತರಲು ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನ ಎಲ್ಲ ಗ್ಲಾಸ್ಗಳು ಹಾಗೂ ಸಾಮಗ್ರಿಗಳನ್ನು ಒಡೆದು ವಿಕೃತಿ ಮೆರೆದಿದ್ದಾರೆ.
ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.