ಧಾರವಾಡ: ಉಮೇಶ್ ಕತ್ತಿ ಅವರ ಉತ್ತರ ಕರ್ನಾಟಕದ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಂದಿನ ಸಿಎಂ ಅಂತಾ ಹೇಳಿದ್ದಾರೆ. ಆದರೆ ಅವರು ನಾಳೆಯೇ ಆಗುತ್ತಾರೆ ಅಂತಾ ಹೇಳಿಲ್ಲವಲ್ಲ? ಎಂದರು.
ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಬರಬೇಕಿದೆ. ಆದರೆ ಅದು ನಾಳೆ, ನಾಡಿದ್ದು ಅಥವಾ ಈ ವರ್ಷದಲ್ಲಿ ಅಂತಲ್ಲ. ಖಂಡಿತವಾಗಿಯೂ ಉತ್ತರ ಕರ್ನಾಟಕದವರು ಸಿಎಂ ಆಗಬೇಕು. ಆದ್ರೆ ಇದೇ ಅವಧಿಯಲ್ಲಿ ಅಂತಾ ಅರ್ಥವಲ್ಲ ಎಂದರು.
ಕಾಂಗ್ರೆಸ್ ಪಕ್ಷದವರು ಭ್ರಷ್ಟಾಚಾರದ ರಕ್ತ ಬಿಜಾಸುರರು. ಭ್ರಷ್ಟಾಚಾರ ಅವರ ರಕ್ತದಲ್ಲಿದೆ. ಭ್ರಷ್ಟಾಚಾರ ಅಂದ್ರೆ ಅದು ಕಾಂಗ್ರೆಸ್ ಎಂದು ಜೋಶಿ ಇದೇ ವೇಳೆ ಟೀಕಿಸಿದರು.
ಇದನ್ನೂ ಓದಿ: ಕಳಂಕರಹಿತ ಶಾಸಕನಾದ ನನಗೆ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ: ಸಚಿವ ಉಮೇಶ್ ಕತ್ತಿ