ಹುಬ್ಬಳ್ಳಿ: ರಾಜ್ಯಸಭೆಗೆ ಮೂರನೇ ಅಭ್ಯರ್ಥಿಯನ್ನು ಮೊದಲು ಕಡಿಮೆ ಸಂಖ್ಯಾಬಲವಿದ್ದವರೇ ಹಾಕಿದ್ದಾರೆ. ಹೀಗಾಗಿ, ನಾವು ಕೂಡಾ ಹಾಕಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಪ್ರಧಾನಿ ಮೋದಿ ಸರ್ಕಾರದ ಪುರಸ್ಕೃತ ಯೋಜನೆಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸ್ಟ್ರಾಟಜಿ ಏನು ಅನ್ನೋದನ್ನು ಬಹಿರಂಗಪಡಿಸಲು ಆಗೋದಿಲ್ಲ. ಮತದಾನ ಆಗಲಿ ಆಮೇಲೆ ಹೇಗೆ ಸ್ಟ್ರಾಟಜಿ ಮಾಡಿದ್ವಿ ಅನ್ನೋದನ್ನ ಹೇಳ್ತಿನಿ. ನಂಗೆ ಬಹಳ ನಂಬಿಕೆ ಇದೆ. ನಮ್ಮ ಮೂರನೇ ಅಭ್ಯರ್ಥಿ ಕೂಡಾ ಗೆಲ್ತಾರೆ. ಯಾಕಂದ್ರೆ ಆ ಎರಡೂ ಪಕ್ಷಗಳಿಗಿಂತ ಹೆಚ್ಚಿನ ಮತಗಳು ನಮ್ಮಲ್ಲಿವೆ. ಹೀಗಾಗಿ, ನಾವು ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಅನಗತ್ಯ ವಿವಾದ ಮಾಡಲಾಗುತ್ತಿದೆ. ಆ ಕಮಿಟಿಯವರು ಮಾಡ್ತಿದ್ದಾರೆ ಮಾಡ್ಲಿ. ಅದು ಬಿಟ್ಟು ಪಠ್ಯಪಸ್ತಕವೇ ಇನ್ನೂ ಹೊರಗಡೆ ಬಂದಿಲ್ಲ. ಕೆಲವರು ಇದನ್ನ ವಿವಾದ ಎಬ್ಬಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬಸವಣ್ಣನವರ ಕುರಿತು ವಿವಾದ ವಿಚಾರ ನಾನಿನ್ನೂ ಅದನ್ನ ಓದಿಲ್ಲ. ಪುಸ್ತಕ ಓದಿಕೊಂಡು ಮಾತನಾಡುತ್ತೇನೆ. ಮಂದಿರ v/s ಮಸೀದಿ ಗದ್ದಲ ವಿಚಾರದಲ್ಲಿ ಎಲ್ಲವನ್ನ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಮಳಲಿ ಮಸೀದಿಯವರು ಸೌಹಾರ್ದಯುತವಾಗಿ ಬಗೆಹರಿಸುವ ಕುರಿತಂತೆ ಮಾತನಾಡಿದ್ದಾರೆ. ನೋಡೋಣ ಏನ್ ಮಾಡ್ತಾರೆ ಎಂದು ಹೇಳಿದರು.
ಓದಿ: ಅಕ್ರಮ ಹಣ ವರ್ಗಾವಣೆ ಕೇಸ್: ದೆಹಲಿ ಕೋರ್ಟ್ನಿಂದ ಡಿಕೆಶಿಗೆ ಸಮನ್ಸ್ ಜಾರಿ