ETV Bharat / state

ನನ್ನನ್ನು ಸಿಎಂ ಮಾಡುವ ಬಗ್ಗೆ ಯಾರೂ ಚರ್ಚಿಸಿಲ್ಲ: ಪ್ರಹ್ಲಾದ್ ಜೋಶಿ

ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆ ಬಗ್ಗೆ ಯಡಿಯೂರಪ್ಪ ಮತ್ತು ಕೇಂದ್ರ ನಾಯಕರಿಗೆ ಮಾತ್ರ ಗೊತ್ತು. ನನ್ನೊಂದಿಗೆ ಯಾರೂ ಚರ್ಚಿಸಿಲ್ಲ ಎಂದಿದ್ದಾರೆ.

Union Minister  Prahlad Joshi reaction about CM Change Issue
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
author img

By

Published : Jul 24, 2021, 1:41 PM IST

Updated : Jul 24, 2021, 2:04 PM IST

ಹುಬ್ಬಳ್ಳಿ : ರಾಜ್ಯ ರಾಜಕಾರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಮತ್ತು ಕೇಂದ್ರ ನಾಯಕರ ಮಧ್ಯೆ ಏನ್ ಮಾತುಕತೆ ನಡೆದಿದೆ ಅದರ ವಿವರ ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಏನೇ ಮಾತುಕತೆ ನಡೆದಿದ್ದರೂ, ಯಡಿಯೂರಪ್ಪ ಹಾಗೂ ಕೇಂದ್ರ ನಾಯಕರಿಗೆ ಮಾತ್ರ ಗೊತ್ತು. ನನ್ನನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಬಗ್ಗೆ ಯಾರೂ ನನ್ನ ಜೊತೆ ಚರ್ಚೆ ಮಾಡಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ, ನರೇಂದ್ರ ಮೋದಿ‌ ಇದ್ದಾರೆ.‌ ನಿರ್ಧಾರ ಅವರು ತೆಗೆದುಕೊಳ್ಳುತ್ತಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಓದಿ : ಸಿಎಂ ಹುದ್ದೆಗೆ ಲಾಬಿ ಮಾಡ್ತಿಲ್ಲ, ಹೈಕಮಾಂಡ್​ ನಿರ್ಧಾರವೇ ಅಂತಿಮ: ನಿರಾಣಿ

ನೀವು ಮುಖ್ಯಮಂತ್ರಿ ಆಗ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಇದಕ್ಕೆ ನೀವೇ ಉತ್ತರ ಹೇಳಬೇಕು ಎಂದು ನಕ್ಕು ಸುಮ್ಮನಾದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತುಟಿಬಿಚ್ಚದ ಸಚಿವರು, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸೂಕ್ತ ವ್ಯಕ್ತಿ ಅಲ್ಲ ಎಂದು ಜಾರಿಕೊಂಡರು.

ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ: ಕಳೆದ ನಾಲ್ಕು ದಿನದಿಂದ ಸಂಸತ್​ ಅಧಿವೇಶ ನಡೆಯಲು ಕಾಂಗ್ರೆಸ್ ಬಿಡುತ್ತಿಲ್ಲ. ಪೋನ್, ಡಾಟಾ ಕದ್ದಾಲಿಕೆ ಮಾಡಿದ್ದೀರಿ‌ ಎಂದು ಆರೋಪಿಸಿ ಸದನ ನಡೆಸಲು ಬಿಡುತ್ತಿಲ್ಲ. ಈಗಾಗಲೇ ಪೆಗಾಸಸ್ ಆ್ಯಪ್ ತಯಾರಿಸಿದ ಎನ್​ಎಸ್ಒ ಕಂಪನಿ ಸ್ಪಷ್ಟನೆ ನೀಡಿದೆ. ರಾಹುಲ್ ಗಾಂಧಿ ನನ್ನ ಫೋನ್​ ಟ್ಯಾಪ್ ಆಗಿದೆ, ಮೋದಿ ನನಗೆ ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಚೈಲ್ಡಿಸ್, ಬೇಸ್​​ಲೆಸ್ ಆರೋಪ ಮಾಡುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಪೋನ್ ಕದ್ದಾಲಿಕೆ ಆಗಿದ್ದರೆ ರಾಹುಲ್ ಎಫ್ಐಆರ್ ದಾಖಲಿಸಿ ತಮ್ಮ‌ ಮೊಬೈಲ್ ಒಪ್ಪಿಸಲಿ. ರಾಹುಲ್ ಗಾಂಧಿ ತಮ್ಮ‌ ಮೊಬೈಲ್​ನಲ್ಲಿ‌ ಪೆಗಾಸಸ್ ಅಪ್ಲಿಕೇಷನ್‌ ಇತ್ತೋ‌ ಇಲ್ವೋ‌ ಎಂಬುವುದರ ಬಗ್ಗೆ ತನಿಖೆ ನಡೆಸಬೇಕು. ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಕಲಾಪ‌ವನ್ನು ಕಾಂಗ್ರೆಸ್ ಹಾಳುಗೆಡವುತ್ತಿದೆ. ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚಿಸಲು ಕಾಂಗ್ರೆಸ್ ಸಿದ್ದವಿಲ್ಲ ಎಂದು ಕಿಡಿಕಾರಿದರು.

Last Updated : Jul 24, 2021, 2:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.