ಹುಬ್ಬಳ್ಳಿ: ಟ್ರಾಫಿಕ್ ಸಿಗ್ನಲ್ ಬಿದ್ದಿದ್ದೇ ತಡ ಹಾಡಹಗಲೇ ಚಲಿಸುತ್ತಿದ್ದ ಸ್ಕೂಟಿಯಲ್ಲಿದ್ದ ಹಣದ ಬ್ಯಾಗ್ ಅನ್ನು ಕಿತ್ತುಕೊಂಡು ಕಳ್ಳರಿಬ್ಬರು ಎಸ್ಕೇಪ್ ಆದ ಘಟನೆ ಹುಬ್ಬಳ್ಳಿ ದೇಶಪಾಂಡೆ ನಗರ ಸರ್ಕಲ್ನ ದಿ ಬಾಟಲ್ ಬಾಕ್ಸ್ ಹತ್ತಿರ ನಡೆದಿದೆ.
ಅಹ್ಮದಾಬಾದ್ ನಿವಾಸಿ ವಿಜಯ್ ಕುಮಾರ್ ಜೈನ್ ಎಂಬಾತ ಸುಮಾರು 5.3 ಲಕ್ಷ ರೂಪಾಯಿ ಹಣವನ್ನು ಸ್ಕೂಟಿಯಲ್ಲಿ ಇಟ್ಟುಕೊಂಡು ತೆರಳುತ್ತಿದ್ದ. ಇದನ್ನು ಗಮನಿಸಿ ಹಿಂಬಾಲಿಸಿದ ಖದೀಮರು, ಸ್ಕೆಚ್ ಹಾಕಿ, ದೇಶಪಾಂಡೆ ನಗರದ ಸರ್ಕಲ್ ಬಳಿ ಟ್ರಾಫಿಕ್ ಸಿಗ್ನಲ್ ಬೀಳುತ್ತಿದ್ದಂತೆ ಸ್ಕೂಟಿಯಲ್ಲಿದ್ದ ಹಣದ ಬ್ಯಾಗ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ರಾತ್ರೋರಾತ್ರಿ ಕಳ್ಳರ ಕೈಚಳಕಕ್ಕೆ ಮೈಸೂರಿಗರು ಕಂಗಾಲು.. ಕಾರಿನೊಳಗಿದ್ದ ಎಲ್ಇಡಿ ಟಿವಿ, ಸ್ಪೀಕರ್ ಮಂಗಮಾಯ
ಈ ಕುರಿತು ಸ್ಥಳಕ್ಕೆ ದೌಡಾಯಿಸಿದ ಎಸಿಪಿ ವಿನೋದ ಮುಕ್ತೆದಾರ, ಉಪನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಖದೀಮರ ಪತ್ತೆಗಾಗಿ ಬಲೆ ಬೀಸಿದ್ದಾರೆ.