ಹುಬ್ಬಳ್ಳಿ: ಮಹಿಳೆಯೋರ್ವಳು ಬಿಯರ್ ಬಾಟಲಿಯಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಲ್ಲೆ ಮಾಡಿದ ಮಹಿಳೆ ಆತನ ಪತ್ನಿಯಲ್ಲ, ಸಹೋದರಿ ಎಂದು ತಿಳಿದು ಬಂದಿದೆ.
ನಗರದ ಬಸವೇಶ್ವರ ಪಾರ್ಕ್ ನಿವಾಸಿ ಪ್ರಿಯದರ್ಶಿನಿ ಪಾಟೀಲ್ ತನ್ನ ಸಹೋದರ ಸಿದ್ಧಲಿಂಗಯ್ಯನ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಹಲ್ಲೆಗೊಳಗಾದ ಸಿದ್ದಲಿಂಗಯ್ಯ ಮನೆಯಲ್ಲಿ ವಯಸ್ಸಿಗೆ ಬಂದ ಸಹೋದರಿಯರಿದ್ದರೂ ಅವರ ಮದುವೆ ಬಗ್ಗೆ ಚಿಂತಿಸದೆ ಕುಡಿದು ಬಂದು ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ರೊಚ್ಚಿಗೆದ್ದ ಸಹೋದರಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ.. ಹುಬ್ಬಳ್ಳಿ : ಕುಡುಕ ಗಂಡನ ತಲೆಯನ್ನೇ ಒಡೆದಳು ಪತ್ನಿ !
ನಗರದ ಸುಳ್ಳ ಕ್ರಾಸ್ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿದ್ದಲಿಂಗಯ್ಯನನ್ನು ಕಿಮ್ಸ್ಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.