ಧಾರವಾಡ: ತೌಕ್ತೆ ಚಂಡಮಾರುತದ ಹೊಡೆತಕ್ಕೆ ನಗರದ ಅಲ್ಲಲ್ಲಿ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ.
ಮೊನ್ನೆಯಿಂದ ಧಾರವಾಡ ಜಿಲ್ಲಾದ್ಯಂತ ಗಾಳಿ ಬೀಸುತ್ತಿದ್ದು, ಇಂದೂ ಕೂಡ ಗಾಳಿಯ ಅಬ್ಬರ ಜೋರಾಗಿದೆ.. ಗಾಳಿಯಿಂದಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ರಸ್ತೆಯಲ್ಲಿನ ಮರ ಕ್ಯಾಂಟರ್ ವಾಹನದ ಮೇಲೆ ಬಿದ್ದಿದೆ. ನಿನ್ನೆ ಗಾಳಿಯೊಂದಿಗೆ ಮಳೆಯ ಅಬ್ಬರ ಕೂಡ ಜೋರಾಗಿತ್ತು. ಇಂದು ಮಳೆಯ ಪ್ರಮಾಣ ಕಡಿಮೆ ಇದ್ದರೂ ಗಾಳಿ ಬೀಸುತ್ತಿದೆ.
ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಆಯಾ ತಾಲೂಕಿನ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.