ETV Bharat / state

ಧಾರವಾಡ: ಪಿ- 2807 ಮತ್ತು ಪಿ - 2808ರ ಪ್ರಯಾಣ ವಿವರ

author img

By

Published : Jun 2, 2020, 7:53 PM IST

ಜಿಲ್ಲೆಯ ಕೊರೊನಾ ಸೋಂಕಿತರಾಗಿರುವ ಪಿ-2807 ಮತ್ತು ಪಿ-2808 ಅವರ ಪ್ರಯಾಣ ವಿವರಗಳನ್ನು ಜಿಲ್ಲಾಡಳಿತ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ. ಈ ಇಬ್ಬರು ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಕೂಡಲೇ ಕೊರೊನಾ ಸಹಾಯವಾಣಿ 1077ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು. ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

Travel history of corona patient
Travel history of corona patient

ಧಾರವಾಡ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ -19 ಸೋಂಕಿತರಾಗಿರುವ ಪಿ-2807 ಮತ್ತು ಪಿ-2808 ಅವರ ಪ್ರಯಾಣ ವಿವರಗಳನ್ನು ಜಿಲ್ಲಾಡಳಿತ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.

ಪಿ- 2807( 26 ವರ್ಷ, ಮಹಿಳೆ)ಅವರ ಪ್ರಯಾಣ ವಿವರ: ಇವರು ಹುಬ್ಬಳ್ಳಿಯ ನವ ಅಯೋಧ್ಯಾನಗರದ ನಿವಾಸಿಯಾಗಿರುತ್ತಾರೆ. ಪಿ - 1123 ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು.‌ ಮೇ.12 ರಂದು ಪಿ - 1123ರವರು ಸಹೋದರನ ಬೈಕ್‌ನಲ್ಲಿ ಹುಬ್ಬಳ್ಳಿ ಬೈಪಾಸ್‌ನಿಂದ ಹೊರಟು ಬೆಳಗಿನ ಜಾವ 2 ಗಂಟೆಗೆ ಹಳೇ ಹುಬ್ಬಳ್ಳಿಯ ನವ ಅಯೋಧ್ಯಾ ನಗರದಲ್ಲಿರುವ ಪಿ- 2807 ಇವರ ಮನೆಗೆ ಬಂದಿರುತ್ತಾರೆ‌.

ಮೇ. 16ರಂದು p -1123ರವರು ಕೋವಿಡ್ -19 ಸೋಂಕಿತರು ಎಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಮೇ.17ರಂದು ಪಿ- 1123 ರವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಪಿ - 2807 ಹಾಗೂ ಅವರ ಕುಟುಂಬ ಸದಸ್ಯರ ಗಂಟಲು ದ್ರವ ಮಾದರಿ ಪಡೆದು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಮೊದಲ ಗಂಟಲು ದ್ರವ ಪರೀಕ್ಷೆಯ ವರದಿ ನೆಗೆಟಿವ್ ಬಂದಿತ್ತು. ಮೇ.28 ರಂದು ಎರಡನೇ ಬಾರಿ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೊಳಪಡಿಸಲಾಗಿದೆ. ಮೇ. 29 ರಂದು ಪಿ - 2807ರವರು ಕೋವಿಡ್ -19 ಸೋಂಕಿತರು ಎಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಿ - 2808 ( 27 ವರ್ಷ, ಮಹಿಳೆ)ರವರ ಪ್ರಯಾಣ ವಿವರ: ಇವರು ಹುಬ್ಬಳ್ಳಿ ನಗರದ ಬೆಂಗೇರಿ ನಿವಾಸಿಯಾಗಿದ್ದಾರೆ. ಫೆಬ್ರುವರಿ 2020ರ ತಿಂಗಳಿನಲ್ಲಿ ಪತಿ ಹಾಗೂ ಪತಿಯ ತಂದೆಯೊಂದಿಗೆ ಮುಂಬೈಗೆ ತೆರಳಿದ್ದರು. ಮೇ 26 ರಂದು ಮಧ್ಯಾಹ್ನ 1:30ಕ್ಕೆ ಖಾಸಗಿ ಆ್ಯಂಬುಲೆನ್ಸ್ (ಎಂ ಹೆಚ್ - 04 - ಎಫ್ ಕೆ - 1480 ) ಮೂಲಕ ಕುಟುಂಬದ 06 ಸದಸ್ಯರು ಹಾಗೂ ಇಬ್ಬರು ವಾಹನ ಚಾಲಕರೊಂದಿಗೆ ಮುಂಬೈ ರಾಜವಾಡಿ ಆಸ್ಪತ್ರೆಯಿಂದ ಹೊರಟು ನಿಪ್ಪಾಣಿ ಚೆಕ್ ಪೋಸ್ಟ್‌ನಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಿಸಿ ಮೇ. 27 ರಂದು ಬೆಳಗ್ಗೆ 7:30 ಕ್ಕೆ ಹುಬ್ಬಳ್ಳಿಗೆ ಬಂದಿದ್ದಾರೆ. ಅಂದೇ ಇವರ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿರುತ್ತದೆ. ಇನ್ನೂ ಇಬ್ಬರು ವಾಹನ ಚಾಲಕರು ವಾಪಸ್ ಮುಂಬೈಗೆ ಹಿಂದಿರುಗಿದ್ದಾರೆ. ಮೇ. 30 ರಂದು ಪಿ - 2808 ಅವರು ಕೋವಿಡ್ -19 ಸೋಂಕಿತರು ಎಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಈ ಸೋಂಕಿತರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಕೂಡಲೇ ಕೊರೊನಾ ಸಹಾಯವಾಣಿ 1077ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು. ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.