ETV Bharat / state

ಅವಳಿನಗರಕ್ಕೆ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ... ಪ್ರೇಕ್ಷಕರು ಪುಲ್ ಖುಷ್

ಈ ಬಾರಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೇ 31 ರಿಂದ ಜೂನ್‌ 3 ರವರೆಗೆ ಒಂದು ಟೆಸ್ಟ್‌ ಹಾಗೂ ಜೂ. 13, 15 ರಂದು ಎರಡು ಏಕದಿನ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ತಂಡ ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ಆಡಲು ಆಗಮಿಸುತ್ತಿದೆ.

hubli
author img

By

Published : May 30, 2019, 5:54 PM IST

Updated : May 30, 2019, 6:16 PM IST

ಹುಬ್ಬಳ್ಳಿ: 2013 ರಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ಎ ತಂಡಗಳ ನಡುವಿನ ಪಂದ್ಯದ ಮೂಲಕ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯ ವಹಿಸಿದ್ದ ವಾಣಿಜ್ಯನಗರಿ ಹುಬ್ಬಳ್ಳಿ ಏಳು ವರ್ಷಗಳ ನಂತರ ಎರಡನೇ ಬಾರಿಗೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ನಡೆಯಲಿದ್ದು ಹುಬ್ಬಳ್ಳಿ ಜನತೆ ಪಂದ್ಯ ವೀಕ್ಷಣೆ ಮಾಡಲು ಕಾತುರರಿಂದ ಕಾಯುತ್ತಿದ್ದಾರೆ.

ಈ ಬಾರಿ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೇ 31 ರಿಂದ ಜೂನ್‌ 3 ರವರೆಗೆ ಒಂದು ಟೆಸ್ಟ್‌ ಹಾಗೂ ಜೂ. 13, 15 ರಂದು ಎರಡು ಏಕದಿನ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ತಂಡ ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ಆಡಲು ಆಗಮಿಸುತ್ತಿದೆ.

ಹುಬ್ಬಳ್ಳಿ ಕೆಎಸಿಎ

2 ಟೆಸ್ಟ್‌, ಐದು ಏಕದಿನ ಪಂದ್ಯ:

ಶ್ರೀಲಂಕಾ ತಂಡ ಒಂದು ತಿಂಗಳ ಪ್ರವಾಸಕ್ಕೆ ಭಾರತಕ್ಕೆ ಆಗಮಿಸಿದ್ದು, ಬೆಳಗಾವಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳು 2 ಟೆಸ್ಟ್‌ ಪಂದ್ಯಗಳು ಹಾಗೂ ಐದು ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಲಿವೆ. ಬೆಳಗಾವಿಯಲ್ಲಿ ಮೇ 25 ರಿಂದ 28 ರವರೆಗೆ ಟೆಸ್ಟ್‌ ಪಂದ್ಯ ಹಾಗೂ ಜೂ.6, 8, 10 ರಂದು ಮೂರು ಏಕದಿನ ಪಂದ್ಯಗಳು ಆಡಿದ ಬಳಿಕ ಉಭಯ ತಂಡದ ಆಟಗಾರರು ಹುಬ್ಬಳ್ಳಿಗೆ ಆಗಮಿಸಿ ಒಂದು ಟೆಸ್ಟ್‌ ಹಾಗೂ 2 ಏಕದಿನ ಪಂದ್ಯ ಆಡಲಿವೆ.

7 ವರ್ಷ ನಂತರ ಅವಕಾಶ:

ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು 2013ರಲ್ಲಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ 3 ಟೆಸ್ಟ್‌, 3 ಏಕದಿನ ಪಂದ್ಯಗಳು ಹಾಗೂ ಒಂದು ಟ್ವೆಂಟಿ-20 ಪಂದ್ಯವನ್ನಾಡಿದ್ದವು. ಸರಣಿಯ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡದ ಸ್ಟಾರ್‌ ಆಟಗಾರರಾಗಿದ್ದ ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ಜಹೀರ್‌ ಖಾನ್‌ ಹಾಗೂ ಭಾರತ ತಂಡದ ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ಆಡಿದ್ದರು. ಇದೀಗ ಮತ್ತೆ ಹುಬ್ಬಳ್ಳಿಯಲ್ಲಿ ಮೇ 31 ರಿಂದ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ಎ ಕ್ರಿಕೆಟ್‌ ತಂಡಗಳ ನಡುವಿನ ಟೆಸ್ಟ್‌ ಪಂದ್ಯಕ್ಕೆ ಮೈದಾನ ಸಜ್ಜಾಗಿದೆ.

Intro:ಹುಬ್ಬಳಿBody:ಸ್ಲಗ್: ಅವಳಿನಗರಕ್ಕೆ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ. ಪ್ರೇಕ್ಷಕರು ಪುಲ್ ಖುಷ್...

ಹುಬ್ಬಳ್ಳಿ:2013 ರಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ಎ ತಂಡಗಳ ನಡುವಿನ ಪಂದ್ಯದ ಮೂಲಕ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯ ವಹಿಸಿದ್ದ ವಾಣಿಜ್ಯನಗರಿ ಹುಬ್ಬಳ್ಳಿ ಎಳು ವರ್ಷಗಳ ನಂತರ ಎರಡನೇ ಬಾರಿಗೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ನಡೆಯಲಿದ್ದು ಹುಬ್ಬಳ್ಳಿ ಜನತೆ ಪಂದ್ಯ ವೀಕ್ಷಣೆ ಮಾಡಲು ಕಾತುರರಿಂದ ಕಾಯುತ್ತಿದ್ದಾರೆ..
ಈ ಬಾರಿ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೇ 31 ರಿಂದ ಜೂನ್‌ 3 ರವರೆಗೆ ಒಂದು ಟೆಸ್ಟ್‌ ಹಾಗೂ ಜೂ. 13, 15 ರಂದು ಎರಡು ಏಕದಿನ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ತಂಡ ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ಆಡಲು ಆಗಮಿಸುತ್ತಿದೆ.
(2 ಟೆಸ್ಟ್‌, ಐದು ಏಕದಿನ ಪಂದ್ಯ):ಶ್ರೀಲಂಕಾ ತಂಡ ಒಂದು ತಿಂಗಳ ಪ್ರವಾಸಕ್ಕೆ ಭಾರತಕ್ಕೆ ಆಗಮಿಸಿದ್ದು, ಬೆಳಗಾವಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳು 2 ಟೆಸ್ಟ್‌ ಪಂದ್ಯಗಳು ಹಾಗೂ ಐದು ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಲಿವೆ. ಬೆಳಗಾವಿಯಲ್ಲಿ ಮೇ 25 ರಿಂದ 28 ರವರೆಗೆ ಟೆಸ್ಟ್‌ ಪಂದ್ಯ ಹಾಗೂ ಜೂ.6, 8, 10 ರಂದು ಮೂರು ಏಕದಿನ ಪಂದ್ಯಗಳು ಆಡಿದ ಬಳಿಕ ಉಭಯ ತಂಡದ ಆಟಗಾರರು ಹುಬ್ಬಳ್ಳಿಗೆ ಆಗಮಿಸಿ ಒಂದು ಟೆಸ್ಟ್‌ ಹಾಗೂ 2 ಏಕದಿನ ಪಂದ್ಯ ಆಡಲಿವೆ. 7 ವರ್ಷ ನಂತರ ಅವಕಾಶ
ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು 2013ರಲ್ಲಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ 3 ಟೆಸ್ಟ್‌, 3 ಏಕದಿನ ಪಂದ್ಯಗಳು ಹಾಗೂ ಒಂದು ಟ್ವೆಂಟಿ-20 ಪಂದ್ಯವನ್ನಾಡಿದ್ದವು. ಸರಣಿಯ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡದ ಸ್ಟಾರ್‌ ಆಟಗಾರರಾಗಿದ್ದ ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ಜಹೀರ್‌ ಖಾನ್‌ ಹಾಗೂ ಭಾರತ ತಂಡದ ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ಆಡಿದ್ದರು.
ಹುಬ್ಬಳ್ಳಿಯಲ್ಲಿ ಮೇ 31 ರಿಂದ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ಎ ಕ್ರಿಕೆಟ್‌ ತಂಡಗಳ ನಡುವಿನ ಟೆಸ್ಟ್‌ ಪಂದ್ಯಕ್ಕೆ ಮೈದಾನ ಸಜ್ಜಾಗಿದೆ. ಲಂಕಾ ಎದುರಿನ ಸರಣಿಗೆ ಭಾರತ ಎ ತಂಡದಲ್ಲಿ ( ಪಿಕೆ ಪಂಚಾಲ್,ಅಂಕಿತ್ ರಜಪೂತ್,ಅನ್ಮೊಲ್ ಪ್ರೀತ್ ಸಿಂಗ್,ಎಆರ್ ಈಸ್ವರನ್,ಇಶಾಂತ್ ಕೊರೆನ್,ಜಯಂತ ಯಾದವ್ ,ಕೆಎಸ್ ಭರತ್,ಆದಿತ್ಯ ಸರ್ವೊಟೆ,ರಾಹುಲ್ ಚಾಹರ್,ರಿಕಿಬೌಲ್,ರಿಂಕು ಸಿಂಗ್,ಶೀವಂ ದುಬೆ, ಸಿದ್ದೇಶ್ ಲಾಡ್, ಭಾರತ‌ ಎ ತಂಡದ ಆಟಗಾರರ ಪಟ್ಟಿ ಇಂತಿದೆ.
ಇನ್ನೂ ಶ್ರೀಲಂಕಾ ಎ ತಂಡದ ಆಟಗಾರರು, ಅಕಿಲಾ ದನಂಜಯ್,ಅಶ್ಯಾಮ್,ಬನುಕಾ ರಾಜಪಕ್ಷ,ಚಮೀಕಾ, ದುಷ್ಮನತಾ,ಕಮೀಂಡು,ಲಹೀರು ಕುಮಾರ,ನೀರೋಷಂತ್,ಪತುಂ ಮಿಷಾಕ, ಪ್ರೀಯಾ ಮಾಲ,ಸದೀರಾ,ಸ್ಯಾಂಡಕಿನ್,ಸಂಗೀತ್ ಕೋರಿಯಾ, ಬಿಸವಾ ಪರ್ನಾಂಡೊ,ಮಲಿಂದಾ,ಪುಷ್ಪಕುಮಾರ, ಶ್ರೀಲಂಕಾ ತಂಡದ ಆಟಗಾರರು ಭಾರತೀಯ ತಂಡದ ಆಟಗಾರರಿಗೆ ಮತ್ತು ಪ್ರೇಕ್ಷಕರ ಅನುಕೂಲಕ್ಕಾಗಿ ಅಗತ್ಯವಿರುವ ಸಿದ್ಧತೆ ಮಾಡಿಕೊಂಡಿದೆ. ಉಭಯ ತಂಡಗಳ ಪಂದ್ಯ ನೋಡಲು ಹೆಚ್ಚಿನ ಅಭಿಮಾನಿಗಳು ಬರುವ ನಿರೀಕ್ಷೆ ಇದ್ದು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಬಾಬಾ ಬುಸದ ಕೆಎಸ್.ಸಿಎ.ಸಂಚಾಲಕ ಹೇಳಿದರು. ಇನ್ನೂ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡವಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡ ಯಶಸ್ವಿಯಾಗುತ್ತಾ ಕಾದು ನೋಡಬೇಕಾಗಿದೆ....

ಬೈಟ:- ಬಾಬಾ ಬುಸದ (ಕೆಎಸ್.ಸಿಎ.ಸಂಚಾಲಕ ) ಧಾರವಾಡ

ಬೈಟ:- ಮಹಾಂತೇಶ್ ಕ್ರಿಕೆಟ್ ಅಭಿಮಾನಿ.

__________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಲ ಕುಂದಗೊಳ
Last Updated : May 30, 2019, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.