ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ನಾಮಪತ್ರಗಳನ್ನು ಹಿಂಪಡೆಯಲು ನಿನ್ನೆ ಕೊನೆಯ ದಿನಾಂಕವಾಗಿದ್ದು 14 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ. ಜೊತೆಗೆ ಅಂತಿಮವಾಗಿ 8 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು:
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ, ಭಾರತೀಯ ಜನತಾ ಪಕ್ಷದ ಎಸ್.ಐ.ಚಿಕ್ಕನಗೌಡ್ರ, ಪಕ್ಷೇತರರಾದ ಈಶ್ವರಪ್ಪ ಭಂಡಿವಾಡ, ತುಳಸಪ್ಪ ದಾಸರ, ರಾಜು ಅನಂತಸಾ ನಾಯಕವಾಡಿ, ಶೈಲಾ ಗೋಣಿ, ಸಿದ್ದಪ್ಪ ಗೋಡಿ ಹಾಗೂ ಸೋಮಣ್ಣ ಮೇಟಿ.
ನಾಮಪತ್ರ ವಾಪಸ್ ಪಡೆದವರು:
ಈರಯ್ಯ ಹಿರೇಮಠ, ಕುತ್ಬುದ್ದೀನ ಬೆಳಗಲಿ, ಕುರಿಯವರ ಶರಣಪ್ಪ,ಗುರುಪುತ್ರ ಕುಳ್ಳೂರ, ಘೋರ್ಪಡೆ ಗುರುನಾಥ, ಚಂದ್ರಶೇಖರ ಜುಟ್ಟಲ, ಮಲ್ಲಿಕಾರ್ಜುನ ಕಿತ್ತೂರ, ಯಲ್ಲಪ್ಪ ದಬಗೊಂದಿ,ವಿಶ್ವನಾಥ ಕೂಬಿಹಾಳ, ವೆಂಕನಗೌಡ ಪಾಟೀಲ, ಶಿವಾನಂದ ಬೆಂತೂರ, ಸುರೇಶ ಸವಣೂರ, ಹಜರತ ಅಲಿ ಶೇಖ್ ಅಲಿಸಾಬ್ ಶೇಖ್ ಹಾಗೂ ಹಜರತ್ ಸಾಹೇಬ ನದಾಫ್.
ಮೇ.19 ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಒಟ್ಟು 1,89,281 ಮತದಾರರಿದ್ದಾರೆ. ಜೊತೆಗೆ 214 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.