ಧಾರವಾಡ: ಬಳ್ಳಾರಿ ಕಾರು ಅಘಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ. ದೆಹಲಿಯಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ನಾನು ಅಲ್ಲಿಂದ ನೇರವಾಗಿ ಇಲ್ಲಿಗೆ ಬಂದಿರುವೆ. ಸದ್ಯ ಈ ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದು, ಕೇಸ್ ಮುಚ್ಚಿ ಹಾಕುವ ಪ್ರಮೇಯವೇ ಇಲ್ಲ ಎಂದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ತನಿಖೆ ಮಾಡಬೇಕು ಎಂಬುದನ್ನು ಸಿಎಂ ನಿರ್ಧಾರ ಮಾಡಲಿ. ಉಹಾಪೋಹದ ಮೇಲೆ ಯಾವುದನ್ನು ಹೇಳೋಕೆ ಸಾಧ್ಯವಿಲ್ಲ. ತಪ್ಪು ಯಾರಿಂದ ಆಗಿದ್ದರೂ ಅದು ತಪ್ಪೇ. ಅವರೆಂಥ ಪ್ರಭಾವಿ ವ್ಯಕ್ತಿಯಾಗಿದ್ದರೂ ಪ್ರಕರಣ ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಎಫ್‌ಐಆರ್‌ನಲ್ಲಿ ಹೆಸರು ತೆಗೆದು ಹಾಕಿದ್ರೆ ಆ ಬಗ್ಗೆಯೂ ತನಿಖೆಯಾಗಲಿ ಎಂದಿದ್ದಾರೆ.
ಕೆಜಿಎಫ್‌ನಲ್ಲಿ ಗಣಿಗಾರಿಕೆ ಪುನರ್ ಆರಂಭ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರಿಗಳಿಂದ ಸರ್ವೆ ನಡೆದಿದೆ. ಕೆಲವೊಂದು ಚಿನ್ನದ ನಿಕ್ಷೇಪ ಸೇರಿದಂತೆ ಖನಿಜಾಂಶ ಇರುವುದು ಪತ್ತೆಯಾಗಿದೆ. ಅಧಿಕಾರಿಗಳಿಂದ ಸರ್ವೆ ನಡೆದಿದೆ. ಸರ್ವೆ ಸಾಧಕ ಬಾಧಕವನ್ನು ನೋಡಿಕೊಂಡು ತಿರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.