ಧಾರವಾಡ : ತಾಲೂಕಿನ ಕೋಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಿಂಜಾರ ಕುಟುಂಬಗಳು ಕಾಡಿನ ಮದ್ಯ ಹೊಲಗಳಲ್ಲಿಯೇ ತಮ್ಮ ಮನೆಗಳನ್ನು ಕಟ್ಟಿಕೊಂಡು ಕೃಷಿಯೇ ಮೂಲ ಕಸಬನ್ನಾಗಿ ಮಾಡಿಕೊಂಡಿವೆ. ಅಷ್ಟೇ ಅಲ್ಲ ಸುಮಾರು ನಲವತ್ತು ವರ್ಷಗಳಿಂದ ನಡು ಕಾಡಿನ ಮಧ್ಯೆಯೇ ತಮ್ಮ ಜೀವನ ನಡೆಸಿಕೊಂಡು ಬಂದಿವೆ.
ಕೃಷಿಯನ್ನೇ ನಂಬಿ ಗ್ರಾಮ ತೊರೆದು ತಮ್ಮ ಜಮೀನುಗಳಿಗೆ ಹೋಗಿ ನೆಲಿಸಿದ ಕುಟುಂಬಗಳು ಈಗ ಐವತ್ತಕ್ಕೂ ಹೆಚ್ಚು ಜನರು ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಇಲ್ಲಿಯ ಕುಟುಂಬಗಳು ಬೆಳೆಯುತ್ತಿದ್ದು, ಕುಡಿಯಲು ಶುದ್ಧ ನೀರು ಇಲ್ಲದೇ ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಸ್ತೆ, ವಿದ್ಯುತ್ ವ್ಯವಸ್ಥೆ ಇಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿಯವರೆಗೂ ನಮಗೆ ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ಮೂಲ ಸೌಕರ್ಯಗಳನ್ನು ಪಡೆದುಕೊಂಡಿಲ್ಲ ಎಂದು ನಿವಾಸಿ ಮಲ್ಲಿಕ್ ನದಾಫ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಅನೇಕರು ಬಂದು ಭರವಸೆಗಳನ್ನು ನೀಡುತ್ತಾರೆ, ಚುನಾವಣೆ ಮುಗಿದ ತಕ್ಷಣ ಯಾವೊಬ್ಬ ಪ್ರತಿನಿಧಿಗಳು ಈ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಮತ್ತೆ ಚುನಾವಣೆ ಬಂದಾಗ ಮಾತ್ರ ಪಿಂಜಾರ ದಡ್ಡಿಗಳು ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನೆನಪಾಗುತ್ತವೆ ಎಂದು ಅಲ್ಲಿನ ನಿವಾಸಿಗಳು ಆಕೋಶ ವ್ಯಕ್ತಪಡಿಸಿದ್ದಾರೆ.
ಓದಿ : ಪಿಎಂ ಮೋದಿ ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲಿ: ತೇಜ್ ಪ್ರತಾಪ್ ಯಾದವ್