ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರನ್ನು ಏಕಾ ಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ ಕಾರ್ಮಿಕರು ನಮಗೆ ನ್ಯಾಯ ಕೊಡಿಸಿ ಎಂದು ರೈಲ್ವೆ ನಿಲ್ದಾಣದ ಆವರಣದಲ್ಲಿ ಕುಳಿತುಕೊಂಡು ಪ್ರತಿಭಟಿಸಿದ್ದಾರೆ.
ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಅತಿ ದೊಡ್ಡದು. ಇಲ್ಲಿಯ ಸ್ವಚ್ಚತೆಗಾಗಿ ಗುತ್ತಿಗೆದಾರ ತಿವಾರಿ ಅವರು 96 ಜನ ಕಾರ್ಮಿಕರನ್ನು ತೆಗೆದುಕೊಂಡಿದ್ದರು. ಆದರೆ ನಿನ್ನೆ ದಿನ ಕೆಲಸ ಮಾಡಿದ ಈ ಎಲ್ಲ ಕಾರ್ಮಿಕರನ್ನು ಏಕಾಏಕಿ ಬೆಳಗ್ಗೆ ನೋಟಿಸ್ ನೀಡಿ ಹೊಸ ಕಾರ್ಮಿಕರನ್ನು ತೆಗದುಕೊಳ್ಳುತ್ತಿದ್ದೇವೆಂದು ಹೇಳಿ ಯಾರೂ ಕೆಲಸಕ್ಕೆ ಬರಬೇಡಿ ಎಂದಿದ್ದಾರೆ. ಸುಮಾರು 15 ರಿಂದ 20 ವರ್ಷಗಳ ಕಾಲ ಇದೇ ಕೆಲಸ ಮಾಡುತ್ತಿದ್ದ ಈ ಎಲ್ಲ ಬಡ ಪೌರ ಕಾರ್ಮಿಕರು ಈಗ ಬೀದಿಗೆ ಬಿದ್ದಿದ್ದಾರೆ.
ಸದ್ಯ ಈ ಎಲ್ಲಾ ಕಾರ್ಮಿಕರು ರೈಲ್ವೆ ನಿಲ್ದಾಣ ಆವರಣದಲ್ಲಿ ಕುಳಿತು ನಮಗೆ ನ್ಯಾಯ ಬೇಕೆಂದು ಹೋರಾಟ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಎಲ್ಲರನ್ನು ಕೆಲಸದಿಂದ ತೆಗದು ಹಾಕಿದ್ದರಿಂದ ಎಲ್ಲ ಬಡ ಕಾರ್ಮಿಕರು ಮುಂದಿನ ಜೀವನ ನಡೆಸುವುದು ಹೇಗೆಂದು ಚಿಂತೆಯಲ್ಲಿದ್ದಾರೆ. ಹೀಗಾಗಿ ಕೂಡಲೆ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ.. ಬಿಲ್ ಪಾವತಿಗೆ ತಾಪಂ ಇಒ ವಿಳಂಬ: ಗುತ್ತಿಗೆದಾರ ಆರೋಪ