ಹುಬ್ಬಳ್ಳಿ: ಸ್ವಚ್ಚತೆ ಹಾಗೂ ನೈರ್ಮಲ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾದ ಆಸ್ಪತ್ರೆಯೇ ಇದರ ಬಗ್ಗೆ ನಿರ್ಲಕ್ಷ್ಯ ತಾಳಿದ್ದು, ತನ್ನ ಆಸ್ಪತ್ರೆ ಹಿಂಬದಿಯ ರಸ್ತೆಯಲ್ಲಿಯೇ ಸಿರಿಂಜ್ ಮತ್ತು ಸಲಾಯಿನ್ ಬಾಟಲಿಗಳನ್ನು ಸುರಿದಿದ್ದು, ಅಲ್ಲಿನ ನಿವಾಸಿಗಳು ಆತಂಕದಲ್ಲಿ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.
ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯ ಹಿಂಭಾಗದಲ್ಲಿರುವ ಗೋಲ್ಡನ್ ಟೌನ್ ಬಳಿ ಸಿರಿಂಜ್ ಮತ್ತು ಸಲಾಯಿನ್ ಬಾಟಲಿಗಳನ್ನು ರಸ್ತೆ ಮೇಲೆ ಹಾಕಿದ್ದು, ಇಲ್ಲಿ ಮಕ್ಕಳು ಮತ್ತು ವೃದ್ಧರು ಈ ರಸ್ತೆಯಲ್ಲಿಯೇ ಓಡಾಡುತ್ತಾರೆ. ಕಾಲಿಗೆ ಏನಾದರೂ ಚುಚ್ಚಿದರೆ ಜೀವಕ್ಕೆ ಅಪಾಯವಾಗುವ ಸಂಭವವಿದೆ.
ಇನ್ನೂ ಈ ಬಗ್ಗೆ ಸ್ಥಳೀಯರು ಆಸ್ಪತ್ರೆಯವರಿಗೆ ಕೇಳಿದರೆ ನಾವು ಹಾಕಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರಂತೆ. ಪಾಲಿಕೆಯ ಕಂಟ್ರೋಲ್ ರೂಂ ನಂಬರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಹೇಳಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇನ್ನು ಆಸ್ಪತ್ರೆಗೆ ಬಳಸಿದಂತಹ ವಸ್ತುಗಳನ್ನು ಸುಸಜ್ಜಿತವವಾಗಿ ಇಟ್ಟು, ಸಾರ್ವಜನಿಕರು ಇಲ್ಲದ ಸ್ಥಳಕ್ಕೆ ರವಾನಿಸುವ ಕೆಲಸ ಮಾಡಬೇಕು. ಆದರೆ, ಆಸ್ಪತ್ರೆ ಮಾತ್ರ ಎಲ್ಲೆಂದರಲ್ಲಿ ಎಸೆಯುವ ಮೂಲಕ ಬೇಜವಾಬ್ದಾರಿತನ ತೋರುತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.