ಹುಬ್ಬಳ್ಳಿ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಲಘಟಗಿಯ ಮೃತ್ಯುಂಜಯ ( ರುಸ್ತುಂಸಾಬ್ ) ಕೆರೆಯಲ್ಲಿ ನಡೆದಿದೆ.
ದುಮ್ಮವಾಡ ಗ್ರಾಮದ ವಿನಯ ಕುಂಬಾರ ( 15) ಅನುಫ್ ಹುಬ್ಬಳ್ಳಿ (15) ಮೃತಪಟ್ಟವರು. ಇಬ್ಬರು ದುಮ್ಮವಾಡದ ಆದರ್ಶ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಇಂದು ಮಧ್ಯಾಹ್ನ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ.
ಇಬ್ಬರ ಶವಗಳು ಇನ್ನು ಪತ್ತೆಯಾಗಿಲ್ಲ. ಆದರೂ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.