ಹುಬ್ಬಳ್ಳಿ: ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ ಮಾಡಿದ್ದು, ಮಗುವಿನ ಮೂಗನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಇಲ್ಲಿನ ಗಣೇಶ ಪೇಟೆಯ ಬಳಿ ನಡೆದಿದೆ. ಇಲ್ಲಿನ ಸುನಿತಾ ಮತ್ತು ವಿಠ್ಠಲ ದಂಪತಿಯ ಮಗ ವಿವೇಕ್ ಎಂಬ ಕಂದಮ್ಮನ ಮೇಲೆ ನಾಯಿ ದಾಳಿ ಮಾಡಿದ್ದು, ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ನಾಯಿಯೊಂದು ಏಕಾಏಕಿ ದಾಳಿ ಮಾಡಿದ್ದು, ಮಗು ಕಿರುಚಿದ ಸದ್ದಿಗೆ ಪೋಷಕರು ಹೊರ ಓಡಿಬಂದಿದ್ದಾರೆ. ಈ ವೇಳೆ ನಾಯಿ ದಾಳಿ ಮಾಡಿ ಮೂಗನ್ನು ಕಚ್ಚಿರುವುದು ಕಂಡುಬಂದಿದೆ. ಬೀದಿನಾಯಿಗಳಿಗೆ ಕಡಿವಾಣ ಹಾಕದ ಪಾಲಿಕೆ ಅಧಿಕಾರಿಗಳ ವಿರುದ್ಧ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಹೊಸ ಟಚ್ ಪಡೆದುಕೊಳ್ಳಲಿದೆ ಹುಬ್ಬಳ್ಳಿಯ ಕೆಎಸ್ಸಿಎ ಗ್ರೌಂಡ್