ETV Bharat / state

ಧಾರವಾಡ: ಕೆಇಎ ಪರೀಕ್ಷೆ ಅಕ್ರಮದ ಬಗ್ಗೆ ಸರ್ಕಾರಕ್ಕೆ ಮೊದಲೇ ದೂರು ನೀಡಿದ್ದ ಅಭ್ಯರ್ಥಿ ಹೇಳಿದ್ದೇನು? - ​ ETV Bharat Karnataka

ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತೆ ಎಂಬುದನ್ನು ಸರ್ಕಾರಕ್ಕೆ ಪತ್ರ ಬರೆದು ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿ ರವಿಶಂಕರ್ ದೂರು ನೀಡಿದ್ದರು.

ಕೆಇಎ ಪರೀಕ್ಷೆ ಅಕ್ರಮ
ಕೆಇಎ ಪರೀಕ್ಷೆ ಅಕ್ರಮ
author img

By ETV Bharat Karnataka Team

Published : Oct 29, 2023, 3:26 PM IST

ಸರ್ಕಾರಕ್ಕೆ ದೂರು ನೀಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿ

ಧಾರವಾಡ : ರಾಜ್ಯದ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 750 ಹುದ್ದೆಗಳಿಗೆ ಕೆಇಎ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಮುಖಾಂತರ ಅಕ್ರಮ ಎಸಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಂಬಂಧ ಸರ್ಕಾರಕ್ಕೆ ದೂರು ನೀಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿ ರವಿಶಂಕರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಎಫ್​ಡಿಎ, ಎಸ್​ಡಿಎ ಪರೀಕ್ಷೆಯಲ್ಲಿ ಅಕ್ರಮವಾಗುತ್ತದೆ ಎಂದು ಅಕ್ಟೋಬರ್ 13ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಖಾಂತರ ಸರ್ಕಾರಕ್ಕೆ ಪತ್ರ ಬರೆದು ದೂರು ನೀಡಿದ್ದೆವು. ಈ ಹಿಂದೆ ಮಾಡಿದ ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಮಾಡಿದವರೇ ಈಗಲೂ ಆಕ್ರಮವೆಸಗುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದೆವು. ಅಲ್ಲದೆ, ಬೆಳಗಾವಿಯಲ್ಲಿ ಒಎಂಆರ್ ತಿದ್ದುಪಡಿ ಮಾಡುವ ಟೀಂ ಇದೆ. ಆ ಟೀಂ ಬಗ್ಗೆಯೂ ಸರ್ಕಾರಕ್ಕೆ ದೂರು ಕೊಟ್ಟಿದ್ದೆವು ಎಂದು ರವಿಶಂಕರ್​ ಹೇಳಿದರು.

ಶನಿವಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ರೇಡ್ ಆಗಿದೆ. ಪತ್ರದ ಮುಖಾಂತರ ಮಾಹಿತಿ ಪ್ರಕಾರ ಇನ್ನೂ ಆನೇಕ ಅಭ್ಯರ್ಥಿಗಳು ಅರೆಸ್ಟ್ ಆಗಬೇಕಿತ್ತು. ಆದರೇ, ಇನ್ನೂ ಬಂಧನ ಆಗಿಲ್ಲ. ಯಾದಗಿರಿಯಲ್ಲಿ 9 ಜನರು ಹಾಗೂ ಕಲಬುರಗಿಯಲ್ಲಿ 9 ಜನ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ 300ಕ್ಕು ಅಧಿಕ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ. ಈ ಮರು ಪರೀಕ್ಷೆ ಮಾಡಬೇಕು ಎಂದು ಸರ್ಕಾರಕ್ಕೆ ರವಿಶಂಕರ್​ ಒತ್ತಾಯಿಸಿದ್ದಾರೆ.

ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಬಯಲಿಗೆ ಬಂದಿದೆ. ಪ್ರಶ್ನೆ ಪತ್ರಿಕೆ ಔಟ್ ಆಗಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಅಭ್ಯರ್ಥಿಗಳ ಜೀವನ ಏನು? ಮಧ್ಯವರ್ತಿಗಳಿಗೆ ದುಡ್ಡು ಕೊಟ್ಟು ನಾವು ಅಪ್ಲಿಕೇಶನ್ ಹಾಕಬೇಕು ಎನ್ನುವ ಸ್ಥಿತಿ ಆಗಿದೆ. ಇನ್ನು ಮುಂದೆ ಕೆಪಿಎಸ್​ಸಿಗೆ ಅರ್ಜಿ ಹಾಕುವುದಿಲ್ಲ. ಇನ್ನಾದರೂ ಸರ್ಕಾರ ಇಂತಹ ಆಕ್ರಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರವಿಶಂಕರ್​​ ಆಗ್ರಹಿಸಿದರು.

ಪ್ರಕರಣ ಹಿನ್ನೆಲೆ : ಶನಿವಾರ ನಡೆದ ಪರೀಕ್ಷೆಯಲ್ಲಿ ಕಲಬುರಗಿ ನಗರದ ಶ್ರೀಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದರು. ಕನ್ನಡ ಇಂಗ್ಲಿಷ್ ಕಮ್ಯುನಿಕೇಷನ್ ಪರೀಕ್ಷೆ ನಡೆಯುವ ವೇಳೆ ಈತ ಬ್ಲೂಟೂತ್ ಸಹಾಯದಿಂದ ಹೊರಗಿನವರಿಂದ ಕೀ ಉತ್ತರ ಪಡೆದು ಅಕ್ರಮ ಎಸಗುತ್ತಿದ್ದ. ಬಂಧನದ ಬಳಿಕ ಆರೋಪಿ ತ್ರಿಮೂರ್ತಿಯನ್ನು ಇಎನ್​ಟಿ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಕೂಡಾ ನಡೆಸಲಾಗಿತ್ತು. ಇನ್ನೋರ್ವ ಅಭ್ಯರ್ಥಿ ಅಭಿಷೇಕ್​ ಎಂಬಾತನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೆಇಎ ಪರೀಕ್ಷೆ ಅಕ್ರಮದಲ್ಲಿ ಮತ್ತೆ ಮುನ್ನೆಲೆಗೆ ಬಂದ ಆರ್ ಡಿ‌ ಪಾಟೀಲ್ ಹೆಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.