ಹುಬ್ಬಳ್ಳಿ: ಸಂಜಯ್ ಘೋಡಾವತ್ ಗ್ರೂಪ್ ಒಡೆತನದ ಸ್ಟಾರ್ ಏರ್ ಕಂಪೆನಿಯು 2021ರ ಜನವರಿ 1ರಿಂದ ವಾರದ 6 ದಿನ ಹುಬ್ಬಳ್ಳಿಯಿಂದ ತಿರುಪತಿಗೆ ತನ್ನ ವಿಮಾನಯಾನ ಸೇವೆ ಆರಂಭಿಸಲಿದೆ.
- " class="align-text-top noRightClick twitterSection" data="">
ತಿರುಪತಿ-ಹುಬ್ಬಳ್ಳಿ ವಿಮಾನ ಬೆಳಗ್ಗೆ 11.55 ಗಂಟೆಗೆ ತಿರುಪತಿಯಿಂದ ಹೊರಟು 13.00 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ತಿರುಪತಿ ವಿಮಾನ 13.25 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 14.30 ಗಂಟೆಗೆ ತಿರುಪತಿ ತಲುಪಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.