ಹುಬ್ಬಳ್ಳಿ: ಸಾರ್ವಜನಿಕರ ಸೌಲಭ್ಯಕ್ಕಾಗಿ ಇದೇ ತಿಂಗಳ 10 ರಿಂದ ಹುಬ್ಬಳ್ಳಿ- ಬೆಂಗಳೂರು ಹಾಗೂ 11ರಿಂದ ಬೆಂಗಳೂರು - ಹೊಸಪೇಟೆಗೆ ನಿತ್ಯ ಸಾಮಾನ್ಯ ದರದಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನ ನೈರುತ್ಯ ರೈಲ್ವೆ ಆರಂಭಿಸಲಿದೆ.
ಮಾರ್ಚ್ 10 ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 4 ಕ್ಕೆ ಬೆಂಗಳೂರು ತಲುಪಲಿದೆ. ಮಾರ್ಚ್ 12 ರಂದು ಬೆಂಗಳೂರಿನಿಂದ ರಾತ್ರಿ 11.55ಕ್ಕೆ ಹೊರಡುವ ರೈಲು ಹುಬ್ಬಳ್ಳಿಗೆ ಮರುದಿನ ಬೆಳಗ್ಗೆ 10 ಗಂಟೆಗೆ ತಲುಪಿದೆ. ನಂತರ ಪ್ರತಿದಿನ ಇದೇ ಸಮಯಕ್ಕೆ ರೈಲು ಸಂಚರಿಸಲಿವೆ.
ಮಾರ್ಚ್ 11ರಂದು ಬೆಳಗ್ಗೆ 5 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 3.45ಕ್ಕೆ ಹೊಸಪೇಟೆಗೆ ತಲುಪಲಿದೆ. ಮಾ.12ರಂದು ಮಧ್ಯಾಹ್ನ 12.10ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು ಬೆಂಗಳೂರಿಗೆ ರಾತ್ರಿ 10.45ಕ್ಕೆ ತಲುಪಲಿದೆ. ನಂತರ ಪ್ರತಿದಿನ ರೈಲು ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.
ಓದಿ : 'ಕಾಲನ್ನೇ ಕೈಗಳನ್ನಾಗಿಸಿ' ಸಾಧನೆ ಮಾಡಿದ ಸಬಿತಾ ಮೋನಿಸ್‌ಗೆ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ ಗರಿ
ಮಾರ್ಚ್11ರಿಂದ ಹೊಸಪೇಟೆ – ಹರಿಹರ ನಡುವೆ ರೈಲು ಸಂಚಾರ ಆರಂಭ : ನೈರುತ್ಯ ರೈಲ್ವೆಯು ಹೊಸಪೇಟೆ - ಹರಿಹರ ನಡುವೆ ನಿತ್ಯ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆರಂಭಿಸಲಿದೆ.
ಮಾರ್ಚ್ 11ರಿಂದ ಮುಂದಿನ ಆದೇಶದ ತನಕ ಹೊಸಪೇಟೆಯಿಂದ ಸಂಜೆ 4 ಗಂಟೆಗೆ ಹೊರಡುವ ರೈಲು ರಾತ್ರಿ 9.15ಕ್ಕೆ ಹರಿಹರ ತಲುಪಲಿದೆ. ಈ ರೈಲು ತುಂಗಭದ್ರಾ ಡ್ಯಾಂ, ವ್ಯಾಸನಕೇರಿ, ವ್ಯಾಸ ಕಾಲೋನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಮಳವಿ, ಕೊಟ್ಟೂರು, ಬೆಣ್ಣೆಹಳ್ಳಿ, ಹರಪನಹಳ್ಳಿ, ತೆಲಿಗಿ, ಅಮರಾವತಿ ಕಾಲೊನಿ, ದಾವಣಗೆರೆ, ತೋಳಹುಣಸೆ, ದಾವಣಗೆರೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಮಾರ್ಚ್ 12ರಿಂದ ಹರಿಹರದಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ರೈಲು 11.45ಕ್ಕೆ ಹೊಸಪೇಟೆಗೆ ಬರಲಿದೆ. ಈ ರೈಲುಗಳಿಗೆ ಸೀಟು ಕಾಯ್ದಿರಿಸಬೇಕಾದ ಅಗತ್ಯವಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.