ETV Bharat / state

ಕೊರೊನಾ ಸೋಂಕಿತರ ಆರೈಕೆಗೆ ವಿಶೇಷ ರೋಬೋಟ್: ಇದು ಹುಬ್ಬಳ್ಳಿ ಹೈದರ ಕೊಡುಗೆ - Hubli news

ಹುಬ್ಬಳ್ಳಿಯ ಕೆಎಲ್‌ಇ ಟೆಕ್ನಾಲಜಿಕಲ್ ಯೂನಿವರ್ಸಿಟಿ ವಿದ್ಯಾರ್ಥಿಗಳು 'ಪ್ರಧಾಯ' ಎಂಬ ಸ್ವಯಂಚಾಲಿತ ರೊಬೋಟಿಕ್ ಯಂತ್ರವನ್ನು ಸಿದ್ದಪಡಿಸಿ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವಿ.ಎಸ್.ವಿ ಪ್ರಸಾದ್ ಪ್ರಾಯೋಜಕತ್ವದಲ್ಲಿ ಕಿಮ್ಸ್ ಆಸ್ಪತ್ರೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಪ್ರಧಾಯ ಎಂಬ ಸ್ವಯಂಚಾಲಿತ ರೊಬೋಟಿಕ್ ಯಂತ್ರ
ಪ್ರಧಾಯ ಎಂಬ ಸ್ವಯಂಚಾಲಿತ ರೊಬೋಟಿಕ್ ಯಂತ್ರ
author img

By

Published : Oct 8, 2020, 4:31 PM IST

ಹುಬ್ಬಳ್ಳಿ: ಕೋವಿಡ್ ಚಿಕಿತ್ಸಾ ಕೊಠಡಿಯಲ್ಲಿ ಕೊರೊನಾ ರೋಗಿಗಳಿಗೆ ಆಹಾರ, ಔಷಧೋಪಚಾರ ಸೇವೆ ನೀಡಲು ಪದೇಪದೆ ಪಿಪಿಇ ಕಿಟ್ ಧರಿಸಿಕೊಂಡು ಹೋಗಬೇಕಿದೆ. ಹೀಗಾಗಿ, ವಾರ್ಡ್‌ಗೆ ಹೋಗುವುದೇ ಒಂದು ರೀತಿಯ ಸವಾಲಿನ ಕೆಲಸ. ಆದರೆ ಇನ್ನು ಮುಂದೆ ಕೋವಿಡ್ ವಾರ್ಡ್‌ಗಳಿಗೆ ವಾರಿಯರ್ಸ್‌ಗಳು ಹೋಗುವ ಅವಶ್ಯಕತೆವೇ ಇರಲ್ಲ. ವೈದ್ಯರ ನೆರವಿಲ್ಲದೇ ಎಂಜಿನಿಯರಿಂಗ್ ವಿದ್ಯಾರ್ಥಿಗಳು ರೋಗಿಗಳ ಆರೈಕೆಗೆ ವಿಭಿನ್ನ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಏಳು ಜನ ಸಿಬ್ಬಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದೆಲ್ಲದರ ನಡುವೆಯೂ ಕೋವಿಡ್ ಸೋಂಕಿತರ ಚಿಕಿತ್ಸೆಗೆ ವೈದ್ಯರು, ಆಸ್ಪತ್ರೆಗಳ ಅರೆ ವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಹೀಗಾಗಿ ಕೋವಿಡ್ -19 ಸಂಕಷ್ಟದ ಕಾರ್ಯಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಸಂಕಲ್ಪ ಮಾಡಿದ ಹುಬ್ಬಳ್ಳಿಯ ಕೆಎಲ್‌ಇ ಟೆಕ್ನಾಲಜಿಕಲ್ ಯೂನಿವರ್ಸಿಟಿ ವಿದ್ಯಾರ್ಥಿಗಳು ನೂತನ ಆವಿಷ್ಕಾರ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಸ್ವಯಂಚಾಲಿತ ರೊಬೋಟಿಕ್ ಯಂತ್ರವನ್ನು ಅಭಿವೃದ್ಧಿಪಡಿಸಿ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವಿ.ಎಸ್.ವಿ ಪ್ರಸಾದ್ ಪ್ರಾಯೋಜಕತ್ವದಲ್ಲಿ ಕಿಮ್ಸ್ ಆಸ್ಪತ್ರೆಗೆ ಉಡುಗೊರೆ ನೀಡಿದ್ದಾರೆ. "ಪ್ರಧಾಯ" ಎಂಬ ಯಂತ್ರವು ರೋಗಿಗಳಿಗೆ ಔಷಧಿ, ಊಟ ಸೇರಿದಂತೆ ಹತ್ತು ಹಲವು ಕಾರ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ರೊಬೋಟಿಕ್ ವಾಹನವನ್ನು ರೆಡಿ ಮಾಡಿದ್ದಾರೆ.

ಕೆಎಲ್ಇ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಪ್ರಯತ್ನದಿಂದ ಈ ವಿಶೇಷ ವಾಹನ ರೂಪುಗೊಂಡಿದೆ. ಸ್ವಯಂಚಾಲಿತ ಮತ್ತು ರಿಮೋಟ್ ಕಂಟ್ರೋಲ್ ಮೂಲಕ ಇದರ ನಿರ್ವಹಣೆ ಮಾಡಲಾಗುತ್ತಿದೆ. ರೊಬೋಟಿಕ್​ ವಾಹನ ಬ್ಯಾಟರಿ ಚಾಲಿತವಾಗಿದ್ದು, ಎಂಟು ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಇಂತಹ ಪ್ರಯತ್ನ ಇದೇ ಮೊದಲ ಬಾರಿಗೆ ಮಾಡಲಾಗಿದ್ದು, ಕೋವಿಡ್ -19 ರೋಗಿಗಳ ಆರೈಕೆಗೆ ಇಂಜಿನಿಯರ್ ವಿದ್ಯಾರ್ಥಿಗಳು ಯಂತ್ರ ಸಿದ್ದಪಡಿಸಿ, ಕೊರೊನಾ ವಾರಿಯರ್ಸ್​ಗಳಿಗೆ ನೆರವಾಗಿದ್ದಾರೆ. ಇನ್ನು ಈ ವಿದ್ಯಾರ್ಥಿಗಳ ಕಾರ್ಯಕ್ಕೆ ವೈದ್ಯರು‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.