ETV Bharat / state

ಪ್ರಯಾಣಿಕರಿಗೆ ನೈಋತ್ಯ ರೈಲ್ವೆಯಿಂದ ಆರೋಗ್ಯ ಸೇವೆ

ಆರೋಗ್ಯವೇ ಭಾಗ್ಯ ಎಂಬ ಧ್ಯೇಯ ಇಟ್ಟಕೊಂಡು ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯವು ಪ್ರಯಾಣಿಕರಿಗಾಗಿ ಆರೋಗ್ಯ ತಪಾಸಣೆ ಘಟಕ ಸ್ಥಾಪನೆ ಮಾಡಿದೆ.

author img

By

Published : Mar 1, 2020, 4:32 AM IST

ರೈಲ್ವೆ ಆರೋಗ್ಯ ಸೇವೆ
ರೈಲ್ವೆ ಆರೋಗ್ಯ ಸೇವೆ

ಹುಬ್ಬಳ್ಳಿ: ಆರೋಗ್ಯಯುತ ಭಾರತ ನಿರ್ಮಾಣದ ಕನಸನ್ನು ಹೊಂದಿರುವ ರೈಲ್ವೆ ಇಲಾಖೆ, ಪ್ರಯಾಣಿಕರಿಗಾಗಿ ಆರೋಗ್ಯ ತಪಾಸಣೆ ಘಟಕ ಸ್ಥಾಪನೆ ಮಾಡಿದೆ. ಹೆಲ್ತಿ ಇಂಡಿಯಾ ಯೋಜನೆಯಡಿ ರೈಲ್ವೆ ನಿಲ್ದಾಣಗಳಲ್ಲಿ ಆರೋಗ್ಯ ಕಿಯೋಸ್ಕ್ ಘಟಕ ಸ್ಥಾಪನೆ ಮಾಡಲಾಗಿದೆ.

ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಐದಕ್ಕೂ ಅಧಿಕ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಆರೋಗ್ಯ ಪರಿಶೀಲಿಸಲು ಕಿಯೋಸ್ಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಎಸ್‌ಡಬ್ಲ್ಯುಆರ್‌ನಲ್ಲಿರುವ ಹುಬ್ಬಳ್ಳಿ ವಿಭಾಗವು ಇತ್ತೀಚೆಗೆ ಧಾರವಾಡ, ಬೆಳಗಾವಿ, ವಾಸ್ಕೋ ಡಿ ಗಾಮಾ, ಬಳ್ಳಾರಿ ಮತ್ತು ಹೊಸಪೆಟ್ ರೈಲ್ವೆ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಕಿಯೋಸ್ಕ್​ಗಳಿಗಾಗಿ ಜಾಗವನ್ನು ನಿಗದಿಪಡಿಸಿದೆ.

ಇಂಟರ್​ನೆಟ್ ಆಫ್ ಥಿಂಗ್ಸ್ (ಐಒಟಿ) ಆಧಾರಿತ ಸ್ಮಾರ್ಟ್ ಕಿಯೋಸ್ಕ್ ಅನ್ನು ಒಳಗೊಂಡಿರುವ ಪಲ್ಸ್ ಆಕ್ಟಿವ್ ಸ್ಟೇಷನ್ ಹೆಸರಿನ ಹೆಲ್ತ್ ಚೆಕ್ ಅಪ್ ಕಿಯೋಸ್ಕ್, 21 ದೇಹದ ಕಾಯಿಲೆಗಳ ಅಪಾಯ ಸೂಚಕಗಳೊಂದಿಗೆ ವರದಿಯನ್ನು ರಚಿಸುತ್ತದೆ. ದೇಹದ ಎತ್ತರ, ತೂಕ, ಬಿಎಂಐನಂತಹ ದೈಹಿಕ ಆಯಾಮಗಳು ಮತ್ತು ರಕ್ತದೊತ್ತಡ, ಎಸ್‌ಪಿಒ 2 ಮತ್ತು ದೇಹದ ಕೊಬ್ಬಿನ ಶೇಕಡಾವಾರು, ಖನಿಜಾಂಶ, ಸ್ನಾಯು ಮತ್ತು ಮೂಳೆ ಸಾಮರ್ಥ್ಯ ಮತ್ತು ದೇಹದ ನೀರಿನಾಂಶಕ್ಕಾಗಿ ದೇಹದ ಸಂಯೋಜನೆಯ ವಿಶ್ಲೇಷಣೆಯೊಂದಿಗೆ ಪಲ್ಸ್ ರೇಟ್ ಸೇರಿದಂತೆ ಹೃದಯ ಆರೋಗ್ಯ ನಿಯತಾಂಕಗಳು ಸೇರಿವೆ. ಜೀವನಶೈಲಿ ರೋಗ ಸೂಚಕಗಳು ಮಧುಮೇಹ, ಅಸ್ಥಿಸಂಧಿವಾತ, ಹೃದಯ ಸಮಸ್ಯೆಗಳು ಮತ್ತು ಅಂತಹುದೇ ಸಮಸ್ಯೆಗಳನ್ನು ತಪಾಸಣೆ ಮೂಲಕ ಪರೀಕ್ಷಿಸಿಕೊಳ್ಳಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.