ETV Bharat / state

ಹಸಿರಾಗಲಿದೆ ನೈಋತ್ಯ ರೈಲ್ವೆ: ಉಸಿರು ನೀಡುವ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ - ವಿದ್ಯುತ್ ಚಾಲಿತ ರೈಲು ಚಾಲನೆ

ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಚಿಂತನೆ ನಡೆಸಿದ್ದು, ಈಗಾಗಲೇ ದ್ವಿಪಥ ಕಾಮಗಾರಿ ಜೊತೆಗೆ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಜೊತೆಗೆ, ಇಂಧನದ ಮೇಲಿನ ಅವಲಂಬನೆ ಕೈ ಬಿಟ್ಟು ಪರಿಸರ ಸ್ನೇಹಿ ರೈಲ್ವೆಯಾಗುವತ್ತ ಮುನ್ನಡೆಯುತ್ತಿದೆ.

south western railway
ಪರಿಸರ ಸ್ನೇಹಿಯಾಗುವತ್ತ ನೈಋತ್ಯ ರೈಲ್ವೆ
author img

By

Published : Sep 18, 2022, 7:47 AM IST

Updated : Sep 18, 2022, 8:40 AM IST

ಹುಬ್ಬಳ್ಳಿ: ಸೌರಶಕ್ತಿ ಮೂಲಕ ರೈಲು ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆ ಮಾಡಿ ನೂರು ಕೋಟಿ ರೂ.ಗೂ ಹೆಚ್ಚು ಉಳಿತಾಯ ಮಾಡಿದ್ದ ನೈಋತ್ಯ ರೈಲ್ವೆ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಇಷ್ಟು ದಿನ ಕಲ್ಲಿದ್ದಲು, ಡೀಸೆಲ್ ಮೂಲಕ ರೈಲು ಚಾಲನೆ ಮಾಡಿದ್ದ ಭಾರತೀಯ ರೈಲ್ವೆ, ಇದೀಗ ವಿದ್ಯುತ್ ಚಾಲಿತ ರೈಲು ಚಾಲನೆ ಮಾಡುವ ಇಂಧನ ಉಳಿತಾಯದೊಂದಿಗೆ ಪರಿಸರ ರಕ್ಷಣೆಯ ಹೊಣೆ ಹೊತ್ತಿದೆ.

ಇದನ್ನೂ ಓದಿ: ಸಂಪಾದನೆಯಲ್ಲಿ ಐತಿಹಾಸಿಕ ದಾಖಲೆ ಬರೆದ ನೈಋತ್ಯ ರೈಲ್ವೆ

ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಚಿಂತನೆ ನಡೆಸಿದ್ದು, ಈಗಾಗಲೇ ದ್ವಿಪಥ ಕಾಮಗಾರಿ ಜೊತೆಗೆ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಇಂಧನದ ಮೇಲಿನ ಅವಲಂಬನೆ ಕೈ ಬಿಟ್ಟು ಪರಿಸರಸ್ನೇಹಿ ರೈಲ್ವೆಯಾಗುವತ್ತ ಸಾಗುತ್ತಿದೆ. ಈಗಾಗಲೇ 3,600 ಕಿಲೋ ಮೀಟರ್ ರೈಲ್ವೆ ರೂಟ್ ಟ್ರ್ಯಾಕ್​ನಲ್ಲಿ ಸುಮಾರು 50% ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. 2024ರ ಮಾರ್ಚ್ ಹೊತ್ತಿಗೆ ಸಂಪೂರ್ಣ ವಿದ್ಯುದ್ದೀಕರಣ ಆಗುವ ಮೂಲಕ ಪರಿಸರ ಸ್ನೇಹಿಯಾಗಿ ನೈಋತ್ಯ ರೈಲ್ವೆ ಹೊರ ಹೊಮ್ಮಲಿದೆ.

ಪರಿಸರ ಸ್ನೇಹಿಯಾಗುವತ್ತ ನೈಋತ್ಯ ರೈಲ್ವೆ

ಇದನ್ನೂ ಓದಿ: ಸೌರಶಕ್ತಿ ಸದ್ಭಳಕೆ ಮಾಡಿದ ನೈಋತ್ಯ ರೈಲ್ವೆ: 1.96 ಕೋಟಿ ರೂ. ಬಿಲ್ ಉಳಿತಾಯ

ನೈಋತ್ಯ ರೈಲ್ವೆ ವಲಯದಲ್ಲಿರುವ ಕರ್ನಾಟಕ ಹಾಗೂ ಗೋವಾ ರಾಜ್ಯದ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿ ಭರದಿಂದ ಸಾಗಿದ್ದು, ಗುಣಮಟ್ಟದ ಸೇವೆಯ ಜೊತೆಗೆ ಪ್ರಯಾಣಿಕರ ಸಮಯಕ್ಕೆ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಜೊತೆಗೆ, ನೈಋತ್ಯ ರೈಲ್ವೆಯು ವಿದ್ಯುದ್ದೀಕರಣದಲ್ಲಿ ದಾಖಲೆ ಸಾಧಿಸಿದೆ. 2021-22 ನೇ ಆರ್ಥಿಕ ವರ್ಷದಲ್ಲಿ 1,750 ರೂಟ್ ಕೀ.ಮೀಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದ್ದು, ಹಸಿರು ರೈಲ್ವೆಯಾಗಿ ಮಾಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ಇದನ್ನೂ ಓದಿ: ಡೀಸೆಲ್ ಉಳಿತಾಯದಲ್ಲಿ ನೈಋತ್ಯ ರೈಲ್ವೆ ದಾಖಲೆ : ಪರಿಸರಕ್ಕೆ ಪೂರಕವಾದ ಚಿಂತನೆ

Last Updated : Sep 18, 2022, 8:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.