ಧಾರವಾಡ: ಕೊರೊನಾ ಮಹಾಮಾರಿಗೆ ತಂದೆ-ಮಗ ಬಲಿಯಾಗಿದ್ದಾರೆ.
ಧಾರವಾಡದಲ್ಲಿ ಕಿರಾಣಿ ವರ್ತಕ ಹಾಗೂ ಕಿರಾಣಿ ವರ್ತಕರ ಸಂಘದ ಕಾರ್ಯದರ್ಶಿಯಾಗಿದ್ದ ರವೀಂದ್ರನಾಥ ವಸ್ತ್ರದ್ (74) ನಿನ್ನೆ ಸೋಂಕಿನಿಂದ ನಿಧನರಾಗಿದ್ದರು. ಇಂದು ಅವರ ಮಗ ವಿಶ್ವನಾಥ ವಸ್ತ್ರದ್ (47) ಕೂಡ ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ.
ಇಬ್ಬರೂ 4 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕುಟುಂಬದಲ್ಲಿ ಇನ್ನೂ ಇಬ್ಬರಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಐವರು ಮಕ್ಕಳೊಂದಿಗೆ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದ ಮಹಿಳೆ.. ನಾಲ್ವರು ದುರ್ಮರಣ