ETV Bharat / state

ಮೈತ್ರಿ ಸಂಬಂಧ ಬಹಳ ದಿನ ಉಳಿಯಲ್ಲ ಅಂತಾ ನಾವು ಹೇಳಿದ್ದ ರೀತಿಯೇ ಆಗುತ್ತಿದೆ: ಬಿಎಸ್​ವೈ

ಸರ್ಕಾರ ಬಹಳ ದಿನ ಉಳಿಯಲ್ಲ ಅಂತಾ ನಾವು‌ ಹೇಳಿದ್ದ ರೀತಿಯೇ ಆಗುತ್ತಿದೆ. ಸರ್ಕಾರ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಭವಿಷ್ಯ ನುಡಿದ ಬಿಎಸ್​ವೈ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
author img

By

Published : May 18, 2019, 4:39 PM IST

ಹುಬ್ಬಳ್ಳಿ: ಚುನಾವಣೆ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿನ ಗೊಂದಲ‌ ಉಲ್ಬಣಗೊಂಡಿದೆ. ಸರ್ಕಾರ ಬಹಳ ದಿನ ಉಳಿಯಲ್ಲ ಅಂತಾ ನಾವು‌ ಹೇಳಿದ್ದ ರೀತಿಯೇ ಆಗುತ್ತಿದೆ. ಸರ್ಕಾರ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಸರ್ಕಾರ ವಿಸರ್ಜಿಸಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ವಿಶ್ವನಾಥ್ ಮತ್ತೊಂದು ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಆದರೆ ಕುಮಾರಸ್ವಾಮಿ ಇದ್ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ ಎಂದರು.

ಸರ್ಕಾರ ವಿಸರ್ಜನೆ ಸುಲಭದ‌ ಕೆಲಸವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಿಗೆ ಸೇರಿ ಕ್ಯಾಬಿನೆಟ್‌ನಲ್ಲಿ ಬಹುಮತದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತೆ. ಕಾಂಗ್ರೆಸ್ ವಿರೋಧಿಸಿದರೆ ಕೇವಲ ಜೆಡಿಎಸ್‌ನಿಂದ ವಿಸರ್ಜನೆ ಮಾಡಕ್ಕೆ ಬರಲ್ಲ. ಕಾನೂನಿನ ತೊಡಕು ಇದೆ ಎಂದು ಅವರು ಕಿವಿ‌ಮಾತು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನವರ ಮನಸ್ಸಲ್ಲೇನಿದೆ, ಏನಾಗುತ್ತೆ ಕಾದು ನೋಡೋಣ. ಒಟ್ಟಾರೆ ಇದೆಲ್ಲದರ ಅರ್ಥ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ತಿರುಗು ಮುರುಗಾಗುತ್ತೆ ಅನ್ನೋದು‌ ಸ್ಪಷ್ಟ ಎಂದರು. ಕಾಂಗ್ರೆಸ್ ಅತಿರಥ ಮಹಾರಥರು ಸೋಲುತ್ತಿದ್ದಾರೆ. ಇದೆಲ್ಲದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ ಗೊಂದಲದ ಗೂಡಾಗಿವೆ. ಹೀಗಾಗಿ ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು‌.

Intro:ಹುಬ್ಬಳಿBody: ಸ್ಲಗ್: ಸರಕಾರ ವಿಸರ್ಜನೆ ಮಾಡವುದು ಸುಲಭದ ಕೆಲಸವಲ್ಲ:- ಬಿಎಸ್ ವೈ ಹೇಳಿಕೆ

ಹುಬ್ಬಳ್ಳಿ: ಚುನಾವಣೆ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿನ ಗೊಂದಲ‌ ಉಲ್ಬಣಗೊಂಡಿದೆ. ಸರ್ಕಾರ ಬಹಳ ದಿನ ಉಳಿಯಲ್ಲ ಅಂತಾ ನಾವು‌ ಹೇಳಿದ್ದವೇ ರೀತಿಯೇ ಆಗುತ್ತಿದೆ.
ಸರ್ಕಾರ ಬೀಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂದು ಮಾಜಿ ಸಿಎಮ್ ಬಿ.ಎಸ್. ಯಡಿಯೂರಪ್ಪ ಹೇಳಿದರು
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಸರ್ಕಾರ ವಿಸರ್ಜಿಸಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ವಿಶ್ವನಾಥ್ ಮತ್ತೊಂದು ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದರೇ ಕುಮಾರಸ್ವಾಮಿ ಇದ್ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ ಎಂದರು.
ಸರ್ಕಾರ ವಿಸರ್ಜನೆ ಸುಲಭದ‌ ಕೆಲಸವಲ್ಲ.
ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಿಗೆ ಸೇರಿ ಕ್ಯಾಬಿನೆಟ್‌ನಲ್ಲಿ ಬಹುಮತದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತೆ.ಕಾಂಗ್ರೆಸ್ ವಿರೋಧಿಸಿದರೆ
ಕೇವಲ ಜೆಡಿಎಸ್‌ನಿಂದ ವಿಸರ್ಜನೆ ಮಾಡಕ್ಕೆ ಬರಲ್ಲ.
ಕಾನೂನಿನ ತೊಡಕು ಇದೆ ಎಂದು ಅವರು ಕಿವಿ‌ ಮಾತು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನವರ ಮನಸ್ಸಲ್ಲೇನಿದೆ, ಏನಾಗುತ್ತೆ ಕಾದು ನೋಡೋಣ. ಒಟ್ಟಾರೆ ಇದೆಲ್ಲದರ ಅರ್ಥ ಲೋಕಸಭಾ ಚುನಾವಣೆ ಮೈತ್ರಿಗೆ ತಿರುಗು ಮುರುಗಾಗುತ್ತೆ ಅನ್ನೋದು‌ ಸ್ಪಷ್ಟ ಎಂದರು.
ಕಾಂಗ್ರೆಸ್ ಅತಿರಥ ಮಹಾರಥರು ಸೋಲುತ್ತಿದ್ದಾರೆ.
ಇದೆಲ್ಲದರಿಂದ ಕಾಂಗ್ರೆಸ್ , ಜೆಡಿಎಸ್‌ನಲ್ಲಿ ಗೊಂದಲದ ಗೂಡಾಗಿದೆ.ಹೀಗಾಗಿ ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು‌.

_________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.