ETV Bharat / state

ಭಾಷಣದ ವೇಳೆ ಟಿಕೆಟ್​ ಆಕಾಂಕ್ಷಿಗಳ ಪರ ಬೆಂಬಲಿಗರ ಘೋಷಣೆ: ಪ್ರಜಾಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ ಗರಂ - ವಿಪಕ್ಷ ನಾಯಕ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ಭಾಷಣದ ಸಂದರ್ಭದಲ್ಲಿ ಟಿಕೆಟ್​ ಆಕಾಂಕ್ಷಿಗಳ ಪರ ಘೋಷಣೆ- ಅಸಮಾಧಾನಗೊಂಡ ಸಿದ್ದರಾಮಯ್ಯ - ಯಾವುದಕ್ಕೆ ಆದರೂ ಸ್ವಲ್ಪ‌ ಇತಿಮಿತಿ ಇರಬೇಕು ಎಂದು ಸಿಡಿಮಿಡಿ

siddaramaiah
ಸಿದ್ದರಾಮಯ್ಯ
author img

By

Published : Mar 1, 2023, 7:02 AM IST

ಪ್ರಜಾಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ ಗರಂ

ಧಾರವಾಡ: ಭಾಷಣದ ವೇಳೆ ಅಭ್ಯರ್ಥಿಗಳ ಪರವಾಗಿ ಆಕಾಂಕ್ಷಿಗಳ ಬೆಂಬಲಿಗರು ಘೋಷಣೆ ಹಾಕಿದ್ದಕ್ಕೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆದರು. ಸುಮ್ಮನೆ ಇರದಿದ್ದರೆ ನಾನು ವೇದಿಕೆಯಿಂದಲೇ ಹೊರಟು ಹೋಗುತ್ತೇನೆ ಎಂದರು. ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತು ಕೇಳುವ ಹಾಗಿದ್ದರೆ ಇಲ್ಲಿ ಇರಿ. ಇಲ್ಲವಾದರೆ ನಿಮಗೆ ಕೈಜೋಡಿಸಿ ಕೇಳಿಕೊಳ್ಳುತ್ತೇನೆ ಹೊರಟು ಹೋಗಿ ಎಂದರು.

ಇಲ್ಲಿ ಎಲ್ಲದ್ದಕ್ಕೂ ಇತಿಮಿತಿ ಇರಬೇಕು. ಕುಡಿಸಿಕೊಂಡು ಬಂದಿದ್ದೀರಾ? ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಅವಾಜ್ ಹಾಕಿದರು. ಇಷ್ಟಾದರೂ ಬೆಂಬಲಿಗರು ಸುಮ್ಮನಾಗದ ಹಿನ್ನೆಲೆ ಸಿದ್ದರಾಮಯ್ಯ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ನಾನು ಈ ಕ್ಷೇತ್ರಕ್ಮೆ ಬಂದಿರುವುದು ಪ್ರಜಾಧ್ವನಿ ಕಾರ್ಯಕ್ರಮಕ್ಕೆ‌. ಇಲ್ಲಿ ಟಿಕೆಟ್ ಹಂಚಿಕೆ ಮಾಡಲು ಬಂದಿಲ್ಲ ಎಂದು ಆಕಾಂಕ್ಷಿಗಳ ವಿರುದ್ಧವೂ ಹರಿಹಾಯ್ದರು.

ಟಿಕೆಟ್ ಹಂಚಿಕೆ‌ ಮಾಡಲು ಬಂದಿಲ್ಲ: ನಾವು ಇಲ್ಲಿ ಭಾಷಣ ಮಾಡಲಿಕ್ಕೆ ಬಂದಿಲ್ಲ. ಅತ್ಯಂತ ಕೆಟ್ಟ ಸರ್ಕಾರವನ್ನು ತೆಗೆದು ಹಾಕಲಿಕ್ಕೆ ಬಂದಿದ್ದೇವೆ. ನವಲಗುಂದ ಕ್ಷೇತ್ರ ಕಾಂಗ್ರೆಸ್ ಗಂಡು ಮೆಟ್ಟಿದ ಕ್ಷೇತ್ರ‌ವಾಗಿದೆ. ಇಲ್ಲಿರುವ ಬಿಜೆಪಿ ಶಾಸಕನನ್ನು ಮನೆಗೆ ಕಳುಹಿಸಬೇಕಿದೆ. ಬಿಜೆಪಿಯವರು ಮನೆ ಹಾಳಾಗ, ಇವರ ಕೈಯಿಂದ ಒಂದೇ ಒಂದು ಮನೆ ಕೊಡಲಿಕ್ಕೆ ಆಡಲಿಲ್ಲ. ಈ ಸರ್ಕಾರವನ್ನು ಮನೆಗೆ ಕಳುಹಿಸಬೇಕಾದ್ರೆ ಯಾರಿಗೆ ಟಿಕೆಟ್ ನೀಡಿದ್ರು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಅರ್ಜಿ ಹಾಕಿದವರಿಗೆಲ್ಲ ಟಿಕೆಟ್ ಕೊಡಲಿಕ್ಕೆ ಆಗುವುದಿಲ್ಲ. ಇಲ್ಲಿ ಎಂಟು ಜನ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಘೋಷಣೆ ಹಾಕಿದ್ರೆ, ಜನರನ್ನು ಕರೆದುಕೊಂಡು ಬಂದ್ರೆ ನಾವು ಟಿಕೆಟ್ ಕೊಡುವುದಿಲ್ಲ. ಜನ ಬೆಂಬಲ ಯಾರಿಗೆ ಇದೆಯೋ ಅವರಿಗೆ ಎಐಸಿಸಿ ಟಿಕೆಟ್ ನೀಡುತ್ತದೆ. ಟಿಕೆಟ್ ಆಕಾಂಕ್ಷಿಗಳಿಗೆ ಸರಿಯಾದ ಸ್ಥಾನಮಾನ‌ ನೀಡಲಾಗುತ್ತದೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನಾನು ಎಂದೂ ನೋಡಿಲ್ಲ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಮಹದಾಯಿ ಯೋಜನೆಯನ್ನು ಇಂದಿಗೂ ಆರಂಭಿಸಲು ಆಗಲಿಲ್ಲ. ಮೊನ್ನೆ ನರೇಂದ್ರ ಮೋದಿಯವರು ಬೆಳಗಾವಿ ಮತ್ತು ಶಿವಮೊಗ್ಗಕ್ಕೆ ಬಂದಿದ್ದರು. ಮಹದಾಯಿ ಬಗ್ಗೆ ಮಾತನಾಡಲಿಲ್ಲ, ಮಹದಾಯಿಗಾಗಿ ಈ ಭಾಗದ ಜನರು ಹೋರಾಟ ಮಾಡಿದ್ರಿ. ಮಹದಾಯಿ ನೀರು ಕೊಡುತ್ತೇವೆಂದು ಯಡಿಯೂರಪ್ಪನವರು ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದರು. ಮಹದಾಯಿ ನೀರು ಕೊಟ್ರಾ..? ರಕ್ತದಲ್ಲಿ ಪತ್ರ ಬರೆಯಲಿಕ್ಕೆ ಯಡಿಯೂರಪ್ಪ ಮೈಯಲ್ಲಿ ರಕ್ತ ಇಲ್ವಾ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬಡವರ ರಕ್ತ ಕುಡಿಯುತ್ತಿದ್ದಾರೆ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಷ್ಟೇ ಬಾರಿ ರಾಜ್ಯಕ್ಕೆ ಬರಲಿ, ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ನಮ್ಮ ಸರ್ಕಾರ ಬರುವುದು ಅಷ್ಟೇ ಸತ್ಯ. ಮೋದಿ ಎಲ್ಲದಕ್ಕೂ ಟ್ಯಾಕ್ಸ್ ಹಾಕಿ, ಬಡವರ ರಕ್ತವನ್ನು ಕುಡಿಯುತ್ತಿದ್ದಾರೆ. ಲಂಚ ತೆಗೆದುಕೊಳ್ಳುವುದು ಕಡಿಮೆ ಮಾಡಿದ್ರೆ ಬಡವರಿಗೆ ಅಕ್ಕಿ ಉಚಿತವಾಗಿ ಕೊಡಬಹುದು ಎಂದು ಸರ್ಕಾರಕ್ಕೆ ಹೇಳಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಂದ ಮೇಲೆ 7 ಕೆಜಿ ಅಲ್ಲ, 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ. ಗ್ಯಾರಂಟಿ ಕಾರ್ಡ್‌ ಎಲ್ಲರ ಮನೆಗೆ ಮುಟ್ಟಿಸಿ ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು.

ಬಿಜೆಪಿಯವರ ಹಾಗೆ ನಾವು ದ್ರೋಹ ಮಾಡಿಲ್ಲ. ಬಿಜೆಪಿಯವರು ಅಭಿವೃದ್ಧಿ ಕೆಲಸ ಮಾಡಿದ್ದಾರಾ?. ಬರಿ ಲೂಟಿ ಮಾಡಿದ್ದಾರೆ. ಬಿಜೆಪಿಯವರು ಅಲಿ ಬಾಬಾ ಚಾಲಿಸ್ ಛೋರ್. ಯಾರೇ ಅಭ್ಯರ್ಥಿಯಾದರೂ ಸಿದ್ದರಾಮಯ್ಯನವರಿಗೆ ವೋಟ್ ಹಾಕಿದಾಗೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ. ಪ್ರಜಾಧ್ವನಿ ಯಾತ್ರೆ ಅಂದ್ರೆ ನಮ್ಮ ಧ್ವನಿ ಅಲ್ಲ, ಜನರ ಧ್ವನಿ ಎಂದರು. ಕಾರ್ಯಕ್ರಮದ ಮಧ್ಯೆದಲ್ಲಿ ಸಿದ್ದರಾಮಯ್ಯ ಅವರಿಗೆ ಕುರಿ ಮರಿ ಹಾಗೂ ಕಂಬಳಿ ಹೊದಿಸಿ ಸನ್ಮಾನ ಮಾಡಲಾಯಿತು.

ಇದನ್ನೂ ಓದಿ: 'ನನ್ನ ಹತ್ಯೆಗೆ ಪ್ರಚೋದಿಸಿದವರು ಪ್ರಧಾನಿ ಪಕ್ಕದಲ್ಲೇ ಇದ್ದಾರೆ, ಬಂಧಿಸಿಲ್ಲ, ವಿಚಾರಣೆಗೊಳಪಡಿಸಿಲ್ಲ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.