ಹುಬ್ಬಳ್ಳಿ: ಪ್ರಧಾನಿ ಮೋದಿ ಘಂಟೆ ಬಾರಿಸಿ, ಚಪ್ಪಾಳೆ ತಟ್ಟಿ ಎಂದರು. ಆದ್ರೀಗ ಕೊರೊನಾ ಸೋಂಕು ವಿಚಾರದಲ್ಲಿ ವಿಶ್ವಕ್ಕೆ ನಾವೇ ಮೊದಲ ಸ್ಥಾನಕ್ಕೆ ಏರಿದರೂ ಆಶ್ಚರ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪರಿಷತ್ ಚುನಾವಣೆ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಾ, ಚಪ್ಪಾಳೆ ತಟ್ಟಿ, ಘಂಟೆ ಬಾರಿಸಲು ಹೇಳುತ್ತಾರೆ. ಇದರಿಂದ ಕೊರೊನಾ ಕಡಿಮೆ ಮಾಡಲು ಸಾಧ್ಯವಾಗುತ್ತಾ?. ಪ್ರತಿ ದಿನ ಲಕ್ಷ ಲಕ್ಷ ಕೊರೊನಾ ಸೋಂಕಿತ ಕೇಸ್ಗಳು ಬರುತ್ತಿವೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಾವು 2ನೇ ಸ್ಥಾನದಲ್ಲಿದ್ದೇವೆ. ನಾವೇ ಮೊದಲ ಸ್ಥಾನಕ್ಕೆ ತಲುಪಿದರೂ ಆಶ್ಚರ್ಯವಿಲ್ಲ ಎಂದರು.
ಮಾಜಿ ಸಿಎಂ ಹೇಳಿಕೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ, ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಇತರ ನಾಯಕರು ಸಾಥ್ ನೀಡಿದರು.