ETV Bharat / state

ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ ಆಚರಣೆಗೆ ಶ್ರೀರಾಮಸೇನೆ ಮನವಿ.. - ಗಣೇಶೋತ್ಸವ ಆಚರಣೆ

ಕನಕದಾಸ ಜಯಂತಿ ಆಚರಣೆಗೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡಬೇಕು ಎಂದು ಶ್ರೀರಾಮ ಸೇನಾ ಸಂಘಟಕರು ಕೂಡ ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ ಆಚರಣೆಗೆ ಶ್ರೀರಾಮಸೇನೆ ಮನವಿ

author img

By

Published : Nov 7, 2022, 3:03 PM IST

ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ ಮೈದಾನ ಮತ್ತೆ ಮುನ್ನೆಲೆಗೆ ಬಂದಿದೆ. ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಈ ಹಿಂದೆ ಮಹಾನಗರ ಪಾಲಿಕೆ ಅವಕಾಶ ನೀಡಿತ್ತು. ಇದರ ಬೆನ್ನಲ್ಲೇ ಹಲವು ಸಂಘಟನೆಗಳು ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿವೆ.

ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಬಸವರಾಜ್​ ಅವರು ಮಾತನಾಡಿದರು

ಕನಕದಾಸ ಜಯಂತಿ ಆಚರಣೆಗೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡಬೇಕು ಎಂದು ಶ್ರೀರಾಮ ಸೇನಾ ಸಂಘಟಕರು ಕೂಡ
ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದಾರೆ. ಇದೇ ನ. 11 ರಂದು ಕನಕದಾಸ ಜಯಂತಿ ಆಚರಣೆಗೆ ಮನವಿ‌ ಮಾಡಲಾಗಿದೆ‌ . ಟಿಪ್ಪು ಜಯಂತಿಗೆ ಅವಕಾಶ ನೀಡಬೇಕು ಎಂದು ಎಐಎಂಐಎಂ ಪಕ್ಷದ ನಾಯಕರು ಮನವಿ ಮಾಡಿದ್ದರ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ‌ ಮಾಡಲಾಗಿದೆ.‌

ನಾವು ಕನಕದಾಸ ಜಯಂತಿ ಅದ್ದೂರಿಯಾಗಿ ಆಚರಿಸಲು ಯೋಚಿಸಿದ್ದೇವೆ. ಅನೇಕ ದೇಶಭಕ್ತಿಯ ಕಾರ್ಯಕ್ರಮಗಳಿದ್ದು, ನಮಗೆ ಮೈದಾನ ನೀಡಲು ಮನವಿ ಮಾಡಿದ್ದೇವೆ. ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದಂತೆ ತಮಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಮುತಾಲಿಕ್ ವಿರೋಧ​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.