ETV Bharat / state

ಸಿಎಂ ಬೊಮ್ಮಾಯಿಗೆ 'ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ' ಪ್ರದಾನ - ಈಟಿವಿ ಭಾರತ ಕನ್ನಡ

ಧಾರವಾಡ ಮುರುಘೇಂದ್ರ ಮಹಾಸ್ವಾಮೀಜಿ 93ನೇ ಜಾತ್ರಾ ಮಹೋತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.

bommai
'ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ
author img

By

Published : Jan 26, 2023, 6:54 AM IST

Updated : Jan 26, 2023, 12:29 PM IST

ಧಾರವಾಡ: ಮುರುಘಾ ಮಠದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ 'ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಮುರಘೇಂದ್ರ ಮಹಾಸ್ವಾಮೀಜಿಗಳ 93ನೇ ಜಾತ್ರಾ ಮಹೋತ್ಸವ ಅಂಗವಾಗಿ ಬುಧಾವರ ಮಠಕ್ಕೆ ಸಿಎಂ ಭೇಟಿ ನೀಡಿದ್ದರು. ಬಳಿಕ ಮಹಾಶಿವಯೋಗಿಗಳ ಕರ್ತೃ ಗದ್ದುಗೆಯ ದರ್ಶನ ಪಡೆದರು. ಸಭಾ ಕಾರ್ಯಕ್ರಮದಲ್ಲಿ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಸಿಎಂ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ನಾಡಿನ ಜನತೆಯಲ್ಲಿ ಉತ್ಕೃಷ್ಠ ಜೀವನ ಪದ್ಧತಿ, ಸಚ್ಚಾರಿತ್ರ್ಯ ರೂಪಿತವಾಗಲು ನಾಡಿನ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕದ ಭವ್ಯ ಪರಂಪರೆಗೆ ಧಾರವಾಡ ಮುರಘಾ ಮಠದ ಕೊಡುಗೆ ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಧಾರವಾಡ ಮುರಘಾ ಮಠವು ಸ್ವಾತಂತ್ರ್ಯ ಪೂರ್ವದಿಂದಲೂ ನಾಡಿನ ಜನರಿಗೆ ಅನ್ನದಾನ ಮತ್ತು ವಿದ್ಯಾದಾನದ ಮೂಲಕ ಅಮೂಲ್ಯ ಕೊಡುಗೆ ನೀಡಿದೆ. ಆದರ್ಶಪ್ರಾಯರಾಗಿದ್ದ ಪೂಜ್ಯ ಮೃತ್ಯುಂಜಯ ಅಪ್ಪಗಳು ಮತ್ತು ಮಹಾಂತ ಅಪ್ಪಗಳು ಸಮಾಜದ ಜನರನ್ನು ಮಕ್ಕಳಂತೆ ಕಂಡು, ಅವರ ಅಭಿವೃದ್ಧಿಗೆ ಶ್ರಮಿಸಿದರು. ಉಚಿತವಾಗಿ ಅನ್ನದಾನ, ವಿದ್ಯಾದಾನದ ಮೂಲಕ ಅನೇಕ ಬಡವರಿಗೆ ಆಶ್ರಯ ನೀಡಿ ಬದುಕು ಕಟ್ಟಿಕೊಟ್ಟರು. ಆ ಪರಂಪರೆ ಇಂದಿಗೂ ಶ್ರೀ ಮಠದಲ್ಲಿ ಮುಂದುವರಿದಿರುವುದು ಹೆಮ್ಮೆಯ ಸಂಗತಿ ಎಂದರು.

ಇದನ್ನೂ ಓದಿ: ಕೇಂದ್ರ ಬಜೆಟ್ ಗೆ ದಿನಗಣನೆ: ಹಿರಿಯರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಬಂತು ಬೇಡಿಕೆ..!

ಧಾರವಾಡ ಮುರಘಾ ಮಠದ ಅಭಿವೃದ್ಧಿಗೆ ಈಗಾಗಲೇ 3 ಕೋಟಿ ರೂ ಅನುದಾನ ನೀಡಲಾಗಿದೆ. ಭವ್ಯವಾದ ಇತಿಹಾಸ ಹೊಂದಿರುವ ಮುರಘರಾಜೇಂದ್ರ ವಿದ್ಯಾರ್ಥಿನಿಲಯದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡಲಾಗುವುದು. ಮಠದ ಕಾರ್ಯಚಟುವಟಿಕೆಗಳಿಗಾಗಿ ಇಂದು 1 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಭಕ್ತ ಮತ್ತು ಗುರು ಪರಂಪರೆಗೆ ಮುರಘಾಮಠದ ಪರಂಪರೆ ಮಾದರಿಯಾಗಿದೆ. ಧಾರವಾಡದ ಜನ ಮುಗ್ದರು, ಪ್ರಾಮಾಣಿಕರು ಮತ್ತು ನಮ್ಮವರೆಂಬ‌ ಭಾವ ತುಂಬಿ ಎಲ್ಲರನ್ನು ಅಪ್ಪಿಕೊಳ್ಳುವವರು. ಅವರ ನಂಬಿಕೆ ಮತ್ತು ಭಕ್ತಿಗಳು ಶ್ರೀ ಮಠದ ಬೆಳವಣಿಗೆಗೆ ಕಾರಣ ಎಂದು ಹೇಳಿದರು.

ಧಾರವಾಡ ಮುರಘಾಮಠವು ಅಪ್ಪಗಳ ಹೆಸರಿನಲ್ಲಿ ನನಗೆ ಪ್ರಶಸ್ತಿ ನೀಡಿ, ನೈತಿಕ ಜವಾಬ್ದಾರಿ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಪೂಜ್ಯ ಮೃತ್ಯುಂಜಯಪ್ಪಗಳ ಮತ್ತು ಮಹಾಂತಪ್ಪಗಳ ಪ್ರೇರಣೆ, ಆಶೀರ್ವಾದದಿಂದ ನಾಡಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಿ ಎಚ್ಚರಿಕೆಯಿಂದ ಮುನ್ನಡೆಯುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಗದಗ-ಡಂಬಳ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ಚಿತ್ತರಗಿ-ಇಲಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಶಿವಲೀಲಾ ವಿನಯ ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಕರ್ನಾಟಕ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವಣಪ್ಪ ಅಷ್ಟಗಿ, ಮಾಜಿ ಶಾಸಕಿ ಸೀಮಾ ಮಸೂತಿ, ಬೆಳಗಾವಿ ನಾಗನೂರಮಠದ ಅಲ್ಲಮಪ್ರಭು ಮಹಾಸ್ವಾಮೀಜಿ, ಮಠದ ಟ್ರಸ್ಟ್ ಕಮೀಟಿ ಸದಸ್ಯರು, ಇತರರು ಇದ್ದರು.

Last Updated : Jan 26, 2023, 12:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.