ETV Bharat / state

ಯಡಿಯೂರಪ್ಪನವರನ್ನ ಕಿತ್ಹಾಕ್ತೀರಾ ಕಿತ್ಹಾಕಿ.. ರಾಜ್ಯಕ್ಕೆ ಅವಮಾನ ಮಾಡ್ಬೇಡಿ.. ಆರ್ ಬಿ ತಿಮ್ಮಾಪುರ

ಬಿಜೆಪಿ ಹೈಕಮಾಂಡಗೆ ಯಡಿಯೂರಪ್ಪ ಬೇಡವಾದರೆ ಕಿತ್ತು ಹಾಕಲಿ. ಆದರೆ, ಆಟವಾಡಿಸುವುದು ಬೇಡ ಎಂದು ಧಾರವಾಡದಲ್ಲಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ.

Sha and Modi are disrespecting CM BSY: R. B. Thimmapura
ಶಾ, ಮೋದಿ ದಯವಿಟ್ಟು ಬಿಎಸ್‌ವೈರನ್ನು ಅವಮರ್ಯಾದಿಸಬೇಡಿ: ಆರ್. ಬಿ. ತಿಮ್ಮಾಪುರ
author img

By

Published : Feb 8, 2020, 4:08 PM IST

ಧಾರವಾಡ: ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪ ಬೇಡವಾದರೆ ಕಿತ್ತು ಹಾಕಲಿ. ಆದರೆ, ಆಟವಾಡಿಸುವುದು ಬೇಡ ಎಂದು ಧಾರವಾಡದಲ್ಲಿ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ.

ಸುದ್ದಿಗಾರರೊದಿಗೆ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್‌ನವರನ್ನ ಇನ್ನೂ ಹತ್ತು ಜನರನ್ನ ಬೇಕಾದ್ರೆ ತೆಗೆದುಕೊಳ್ಳಲಿ. ನಮ್ಮವರನ್ನು ರಾಜೀನಾಮೆ ಕೊಡಿಸೋದಾದ್ರೆ ಕೊಡಿಸಲಿ. ಆದರೆ, ಯಡಿಯೂರಪ್ಪನವರನ್ನ ಆಡವಾಡಿಸುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಂತ್ರಿ ಪದವಿ ಜಗಳ ಬಿಟ್ಟು ಅಭಿವೃದ್ದಿ ಕಡೆ ಗಮನ ಕೊಡಬೇಕು. ಬಿಎಸ್‌ವೈಗೆ ಅವಮರ್ಯಾದೆ ಮಾಡುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ. ಯಡಿಯೂರಪ್ಪಗೆ ಅವಮಾನ ಮಾಡಿದ್ರೆ ರಾಜ್ಯದ ಜನತೆಗೆ ಅವಮಾನ ಮಾಡಿದಂತೆ. ಯಡಿಯೂರಪ್ಪ ರಾಜ್ಯದ ಸಿಎಂ ಆಗಿ ಶಾ, ಮೋದಿ ಮುಂದೆ ತಗ್ಗಿ ಬಗ್ಗಿ ನಡೆಯುವುದು ಸರಿಯಲ್ಲ. ಇದು ರಾಜ್ಯದ ಜನರಿಗೆ ಮಾಡುವ ಅವಮಾನ ಎಂದು‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಎಐಸಿಸಿ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಪಕ್ಷದಲ್ಲಿ ಬಹುತೇಕರು ಅರ್ಹರಿದ್ದಾರೆ. ಹೈಕಮಾಂಡ್​ ಯಾರನ್ನು ಆರಿಸುತ್ತೆಯೋ ಕಾದು ನೋಡಬೇಕಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.