ಹುಬ್ಬಳ್ಳಿ: ನಿಮ್ಮ ಪಾಲಕರು ದರ್ಗಾಕ್ಕೆ ಕರೆದುಕೊಂಡು ಬಾ ಎಂದು ಕಳುಹಿಸಿದ್ದಾರೆ ಎಂದು ಪುಸಲಾಯಿಸಿ ಅಪ್ರಾಪ್ತ ಬಾಲಕಿಯನ್ನು ಬೈಕಿನಲ್ಲಿ ಕೂರಿಸಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
![Sexual harassment on girl: Quick to detect accused](https://etvbharatimages.akamaized.net/etvbharat/prod-images/4769047_thumbhbl.jpg)
ಇಲ್ಲಿನ ಎಸ್.ಎಂ.ಕೃಷ್ಣ ನಗರದ ಅಜ್ಜಿಯ ಮನೆಯಲ್ಲಿದ್ದ 14 ವರ್ಷದ ಬಾಲಕಿಯನ್ನು ಬೈಕ್ನಲ್ಲಿ ಬಂದ ಯುವಕನೊಬ್ಬ ಹತ್ತಿರದ ಅಲ್ತಾಫ್ ನಗರದ ದರ್ಗಾದಲ್ಲಿ ತಂದೆ, ತಾಯಿ ಕಾಯುತ್ತಿದ್ದಾರೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆತನ ಸಹಚರರು ಆಟೋದಲ್ಲಿ ಹಿಂಬಾಲಿಸಿದ್ದು, ಅಂಚಟಗೇರಿ ಕ್ರಾಸ್ವರೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಅಸ್ವಸ್ಥಗೊಂಡ ಬಾಲಕಿ ಅಲ್ಲಿಂದ ವಾಪಾಸ್ ಮನೆಗೆ ಬಂದಿದ್ದಾಳೆ. ಈ ವಿಚಾರ ನಂತರ ಪೋಷಕರ ಗಮನಕ್ಕೆ ಬಂದಿದ್ದು, ಕೂಡಲೇ ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.