ETV Bharat / state

ವ್ಯಕ್ತಿಯ ರಕ್ಷಿಸಲು ಹೋಗಿ ತಾವೇ ಸಿಲುಕಿ ರಾತ್ರಿಯಿಡೀ ನಡುಗಡ್ಡೆಯಲ್ಲಿ ಕಾಲ ಕಳೆದ ಅಧಿಕಾರಿಗಳು! - District Collector Deepa Cholan

ಬೆಳಗಿನ ಜಾವ 6 ಗಂಟೆಗೆ ಬಾಗಲಕೋಟೆಯಿಂದ ಬಂದ ಮತ್ತೊಂದು ಬೋಟ್​​ನಲ್ಲಿ ಎಲ್ಲಾ 7 ಜನರನ್ನು ಹನಸಿ ಗ್ರಾಮದ ಮೂಲಕ ಸುರಕ್ಷಿತವಾಗಿ ಕರೆ ತರಲಾಯಿತು.

ತುಪ್ಪರಿಹಳ್ಳ
author img

By

Published : Aug 7, 2019, 12:54 PM IST

ಧಾರವಾಡ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಿನ್ನೆ ನವಲಗುಂದ ತಾಲೂಕಿನ ಶಿರಕೋಳದ ತುಪ್ಪರಿಹಳ್ಳದಲ್ಲಿ ಸಿಲುಕಿದ್ದ ಬಸವಣ್ಣೆಪ್ಪ ಶಂಕ್ರಪ್ಪ ಹೆಬಸೂರ ಅವರನ್ನು ರಕ್ಷಿಸಲು ನಾಲ್ಕು ಜನ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಎಸಿ ಹಾಗೂ ಓರ್ವ ಪಿಎಸ್​ಐ ತೆರಳಿದ್ದರು.

ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್, ಪಿಎಸ್​​ಐ ಜಯಪಾಲ ಅವರಿದ್ದ ಬೋಟ್​​ನ ಇಂಜಿನ್ ಕಲ್ಲಿಗೆ ಸಿಲುಕಿದ್ದರಿಂದ ರಾತ್ರಿಯಿಡೀ ಹಳ್ಳದ ಪ್ರವಾಹದ ಮಧ್ಯೆ ನಡುಗಡ್ಡೆಯೊಂದರಲ್ಲಿ ಕಾಲ ಕಳೆಯಬೇಕಾಯಿತು. ಬೆಳಗಿನ ಜಾವ ಮೂರು ಗಂಟೆಗೆ ಮುಳುಗು ತಜ್ಞರು ಅವರನ್ನು ತಲುಪಲು ಯತ್ನಿಸಿದರಾದರೂ ಎಸಿ ಹಾಗೂ ಪಿಎಸ್​​ಐ ಅವರು ಮುಳುಗು ತಜ್ಞರಿಗೆ ಆ ಸಮಯದಲ್ಲಿ ಬರುವುದು ಬೇಡ ಎಂದು ಸೂಚನೆ ನೀಡಿದ್ದರಿಂದ ಅವರು ವಾಪಸು ಬಂದರು.

ತುಪ್ಪರಿಹಳ್ಳ

ಇಂದು ಬೆಳಗಿನ ಜಾವ 6 ಗಂಟೆಗೆ ಬಾಗಲಕೋಟೆಯಿಂದ ಬಂದ ಮತ್ತೊಂದು ಬೋಟ್​​ನಲ್ಲಿ​ ಎಲ್ಲಾ 7 ಜನರನ್ನು ಹನಸಿ ಗ್ರಾಮದ ಮೂಲಕ ಸುರಕ್ಷಿತವಾಗಿ ಕರೆ ತರಲಾಯಿತು. ಜಿಲ್ಲಾಧಿಕಾರಿ ದೀಪಾ ಚೋಳನ್, ಎಸ್​​ಪಿ ಸಂಗೀತ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ತಹಶೀಲ್ದಾರ್ ನವೀನ ಹುಲ್ಲೂರ ಸೇರಿದಂತೆ ಅನೇಕರು ರಾತ್ರಿಯಿಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

Intro:ಹುಬ್ಬಳ್ಳಿ-03
ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಿನ್ನೆ ನವಲಗುಂದ ತಾಲ್ಲೂಕಿನ ತುಪ್ಪರಿಹಳ್ಳಕ್ಕೆ ಶಿರಕೋಳದಲ್ಲಿ ಸಿಲುಕಿದ್ದ ಬಸವಣ್ಣೆಪ್ಪ ಶಂಕ್ರಪ್ಪ ಹೆಬಸೂರ ಅವರನ್ನು ರಕ್ಷಿಸಲು ನಾಲ್ಕು ಜನ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ತೆರಳಿದ್ದ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಪಿಎಸ್ ಐ ಜಯಪಾಲ ಅವರು ಬೋಟ್ ನ ಇಂಜಿನ್ ಕಲ್ಲಿಗೆ ಸಿಲುಕಿದ್ದರಿಂದ ರಾತ್ರಿಯಿಡೀ ಹಳ್ಳದ ಪ್ರವಾಹದ ಮಧ್ಯೆ ನಡುಗಡ್ಡೆಯೊಂದರಲ್ಲಿ ಕಾಲ ಕಳೆಯಬೇಕಾಯಿತು.ಬೆಳಗಿನ ಜಾವ ಮೂರು ಗಂಟೆಗೆ ಮುಳುಗು ತಜ್ಞರು ಅವರನ್ನು ತಲುಪಲು ಯತ್ನಿಸಿದರಾದರೂ ಎಸಿ ಹಾಗೂ ಪಿಎಸ್ ಐ ಅವರು ಮುಳುಗು ತಜ್ಞರಿಗೆ ಆ ಸಮಯದಲ್ಲಿ ಬರುವುದು ಬೇಡ ಎಂದು ಸೂಚನೆ ನೀಡಿದ್ದರಿಂದ ಅವರು ವಾಪಸು ಬಂದರು.
ಇಂದು ಬೆಳಗಿನ ಜಾವ 6 ಗಂಟೆಗೆ ಬಾಗಲಕೋಟದಿಂದ ಬಂದ ಮತ್ತೊಂದು ಬೋಟ್ ಮೂಲಕ ಎಲ್ಲಾ ಏಳು ಜನರನ್ನು ಹನಸಿ ಗ್ರಾಮದ ಮೂಲಕ ಸುರಕ್ಷಿತವಾಗಿ ಕರೆತರಲಾಯಿತು.
ಜಿಲ್ಲಾಧಿಕಾರಿ ದೀಪಾ ಚೋಳನ್,ಎಸ್ ಪಿ ಸಂಗೀತ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ತಹಸೀಲ್ದಾರ ನವೀನ ಹುಲ್ಲೂರ ಸೇರಿದಂತೆ ಅನೇಕರು ರಾತ್ರಿಯಿಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.