ETV Bharat / state

ಧಾರವಾಡದಲ್ಲಿ ಕೊರೊನಾ ಹೆಚ್ಚಳ: ಸೋಂಕಿತ ಸರ್ಕಾರಿ ನೌಕರರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ

ಧಾರವಾಡ ಜಿಲ್ಲೆಯ ಕೊರೊನಾ ಸೋಂಕಿತರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಕೊರೊನಾ ಸೋಂಕಿತ ಸರ್ಕಾರಿ ಸಿಬ್ಬಂದಿಗೆ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

Dharwad
ಸೋಂಕಿತ ಸರ್ಕಾರಿ ನೌಕರರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ
author img

By

Published : Jul 6, 2020, 9:28 PM IST

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಅಲ್ಲದೇ ಸರ್ಕಾರಿ ನೌಕರರು ಹಾಗೂ ಕೊರೊನಾ ವಾರಿಯರ್ಸ್​ಗೂ ಸೋಂಕು ತಗುಲುತ್ತಿದೆ. ಆದ್ರೆ ಜಿಲ್ಲೆಯ ಸೋಂಕಿತರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಸರ್ಕಾರಿ ಸಿಬ್ಬಂದಿಗೆ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಸೋಂಕಿತ ಸರ್ಕಾರಿ ನೌಕರರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ

ನಗರದ ಬಿ.ಡಿ.ಜತ್ತಿ ಹೋಮಿಯೋಪತಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್​ ಮಾಡಲಾಗಿದೆ. ಈಗಾಗಲೇ ಹೆಲ್ತ್ ವರ್ಕರ್ಸ್ 5 ಜನ, ಜಿಲ್ಲಾ ಪಂಚಾಯತ್​ನ ಒಬ್ಬರು, ಖಜಾನೆ ಇಲಾಖೆಯ ಒಬ್ಬರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಒಬ್ಬರು, ನೀರಾವರಿ ಇಲಾಖೆಯ ಒಬ್ಬರು ಹಾಗೂ ಪೊಲೀಸ್ ಇಲಾಖೆಯ 3 ಜನ ಸಿಬ್ಬಂದಿಗೆ ಸೋಂಕು ತಗುಲಿದೆ. ಇದರಿಂದ ಸೋಂಕಿತರು ಕಂಡು ಬಂದ ಸರ್ಕಾರಿ ಕಚೇರಿಗಳನ್ನು ಸಹ ಸ್ಯಾನಿಟೈಸ್​​ ಮಾಡಲಾಗುತ್ತಿದ್ದು, ಎರಡು ದಿನ ಸೀಲ್​ ಡೌನ್​ ಮಾಡಲಾಗುತ್ತಿದೆ.

ಸೋಂಕಿತ ಸರ್ಕಾರಿ ಸಿಬ್ಬಂದಿಗೆ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲು ಮುಂದಾಗಿರುವುದು ಕೊರೊನಾ ವಾರಿಯರ್ಸ್​ಗೆ ಅನುಕೂಲವಾಗಲಿದೆ. ನಿತ್ಯ ಜನರ ಪರವಾಗಿ ಇವರು ಕೆಲಸ ನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ಬೇರೆಡೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.

ಈಗಾಗಲೇ ಸಿವಿಲ್ ಆಸ್ಪತ್ರೆಯ ಸ್ಟಾಫ್​ ನರ್ಸ್, ಪೊಲೀಸ್ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಸೋಂಕಿತ ಸರ್ಕಾರಿ ಸಿಬ್ಬಂದಿಗೆ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.