ETV Bharat / state

ಸಂಸತ್​ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಸಚಿವ ಸಂತೋಷ್​ ಲಾಡ್ ಹೇಳಿದ್ದೇನು?

ಎಂಪಿ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಅವರವರ ಪಕ್ಷಗಳಿಗೆ ಬಿಟ್ಟ ವಿಚಾರ. ಕಳೆದ ಸಲ‌ ನಾವು ಕೂಡ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು ಎಂದು ಸಚಿವ ಸಂತೋಷ್​ ಲಾಡ್ ಅಭಿಪ್ರಾಯ ವ್ಯಕ್ತಪಡಿಸಿದರು.

santhosh lad
ಸಚಿವ ಸಂತೋಷ್​ ಲಾಡ್
author img

By

Published : Jul 15, 2023, 1:25 PM IST

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್​ ಲಾಡ್

ಹುಬ್ಬಳ್ಳಿ/ಧಾರವಾಡ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ್​ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಅವರವರ ಪಕ್ಷದ ವಿಚಾರ, ರಾಜಕೀಯ ಪಕ್ಷಗಳು ಆಗಾಗ ಮೈತ್ರಿ ಮಾಡಿಕೊಳ್ಳುತ್ತವೆ. ಅದು ಆಯಾ ಪಕ್ಷಗಳ ನಿಲುವು" ಎಂದಿದ್ದಾರೆ.

ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಸಲ‌ ನಾವು ಕೂಡ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಅದು ಅವರವರ ಇಚ್ಛಾಶಕ್ತಿ, ಅವರ ಪಕ್ಷಗಳ ವಿಚಾರ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ, ಬಿಜೆಪಿಗೆ ಸೋಲಿನ ಭಯ ಇರಬಹುದು ಎಂದು ಟೀಕಿಸಿದರು.

"ಭಾರತ ದೇಶ ಜೋಡಿಸುತ್ತೇನೆ ಅಂತ ರಾಹುಲ್ ಗಾಂಧಿ ಹೊರಟಿದ್ದು, ಅವರ ಪ್ರಖ್ಯಾತಿ ಹೆಚ್ಚುತ್ತಿದೆ. ಬಿಜೆಪಿಯವರು ಬೆಂಕಿ ಹಚ್ಚಿ ದೇಶ ಒಡೆಯುತ್ತಿದ್ದಾರೆ. ಅದನ್ನು ಜೋಡಿಸುವ ಕೆಲಸವನ್ನು ನಾ ಮಾಡುವೆ ಎಂದು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಉದ್ಯಮಿ ಅದಾನಿ ವಿರುದ್ಧ ರಾಗಾ ಮಾತನಾಡಲು ಶುರು ಮಾಡಿದ್ದೇ ಅನರ್ಹತೆಗೆ ಕಾರಣವಾಗಿದೆ. ಅದಾನಿಗೂ ಮೋದಿಗೂ ಏನು ಸಂಬಂಧ ಅಂತಾ ಕೇಳುವುದಕ್ಕೆ ಶುರು ಮಾಡಿದ್ದರು. ಆಗ ಲೋಪದೋಷ ಹುಡುಕಿ ಅಸಂವಿಧಾನಿಕ ಪದ ತೆಗೆದರು. ಹೀಗಾಗಿ, ಸದಸ್ಯತ್ವ ಅನರ್ಹ ಮಾಡಿದ್ದಾರೆ. ಇದನ್ನೆಲ್ಲಾ ಇಡೀ ಭಾರತ ದೇಶ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆ ವಿಚಾರದ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, " ರಾಜ್ಯದಲ್ಲಿ ಬರಗಾಲ ಘೋಷಿಸಬೇಕೆಂಬ ಬೇಡಿಕೆ ಇದೆ, ಇದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ಸರ್ವೆ ವರದಿ, ಮಳೆ ಅಂಕಿ ಸಂಖ್ಯೆ ನೋಡಿ ತೀರ್ಮಾನ ಮಾಡಲಾಗುತ್ತದೆ. ಈಗಾಗಲೇ ಸರ್ಕಾರ, ಸಂಬಂಧಿಸಿದ ಸಚಿವರು ಮಾಹಿತಿ ಪಡೆದಿದ್ದಾರೆ. ಸಂಬಂಧಿತ ಇಲಾಖೆಯ ಸಚಿವರೇ ತೀರ್ಮಾನ ಹೇಳುತ್ತಾರೆ. ಧಾರವಾಡ ಜಿಲ್ಲೆಯಲ್ಲಿಯೂ ಮಳೆ ಕಡಿಮೆ ಆಗುತ್ತಿದೆ. ಶೇ. 55ರಷ್ಟು ಮಳೆ ಕೊರತೆ ಇದೆ. ಹೀಗಾಗಿ, ಬರಗಾಲ ಘೋಷಣೆ ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

ವರ್ಗಾವಣೆ ದಂಧೆ ಬಗ್ಗೆ ಹೆಚ್‌ಡಿಕೆ ಆರೋಪ‌ದ ಕುರಿತು ಮಾತನಾಡಿ, " ಅವರು ಏನು ಹೇಳಿದ್ದಾರೋ ಅದರ ಬಗ್ಗೆ ಮಾಹಿತಿ ಇಲ್ಲ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ವರ್ಗಾವಣೆಗಳು ಸಹಜ. ಆದರೆ, ಹೆಚ್‌ಡಿಕೆ ಯಾವ ಆಧಾರದ ಮೇಲೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ" ಎಂದು ಹೇಳಿದರು.

ಇನ್ನು ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಬಗ್ಗೆ ಅಧ್ಯಕ್ಷರು ಅರ್ಜಿಗಳನ್ನು ಕೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವ ಕೆಲಸವನ್ನ ಕಮಿಷನರ್ ಸಂತೋಷ ಬಾಬು ಮಾಡುತ್ತಿದ್ದಾರೆ. ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ : ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ: ಸಚಿವ ಸಂತೋಷ ಲಾಡ್

ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಬಿಜೆಪಿ ಅವರಿಗೆ ಕೇಳಿ, ದೇಶದಲ್ಲಿನ ಎಲ್ಲದಕ್ಕೂ ಅವರೇ ಸಲಹೆ ಕೊಡ್ತಾರೆ. ಅವರಿಗೆ ಇಂತಹ ಪ್ರಶ್ನೆ ಕೇಳಿದ್ರೆ ಉತ್ತರ ಕೊಡಲ್ಲ ಎಂದು ವ್ಯಂಗ್ಯವಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.