ಹುಬ್ಬಳ್ಳಿ : ಸಿ ಎಂ ಇಬ್ರಾಹಿಂ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಲು ಬಂದಿದ್ದೇನೆ. ಭೇಟಿಯ ನಂತರ ಏನೆಲ್ಲಾ ಚರ್ಚೆಯಾಗಿದೆ ಎನ್ನುವುದನ್ನು ಹೇಳುತ್ತೇನೆ. ನಾನು ಎಲ್ಲಿಯೂ ಪಕ್ಷ ಬಿಡುತ್ತೇನೆ ಅಂತಾ ಹೇಳಿಲ್ಲ.
ನಾನು ವಿಪಕ್ಷ ನಾಯಕನಿದ್ದಾಗ ಸಾಕಷ್ಟು ಬೆಂಬಲ ನೀಡಿದ್ದರು. ಅವರಿಗೆ ವಿಪಕ್ಷ ನಾಯಕ ಸ್ಥಾನ ಸಿಗಬೇಕಿತ್ತು. ಕೇವಲ ಅದು ಅವರಿಗೆ ಆದ ನಷ್ಟ ಅಲ್ಲ. ಆ ಸಮುದಾಯಕ್ಕೂ ನಷ್ಟ ಎಂದು ವಿಧಾನ ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಭೇಟಿಗಾಗಿ ಆಗಮಿಸಿದ ವೇಳೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅವರು ಕೂಡ ನೋವು ತೋಡಿಕೊಂಡಿದ್ದಾರೆ. ಅವರ ಮನವೊಲಿಸುವ ಕೆಲಸ ಮಾಡುತ್ತೇನೆ. ಪಕ್ಷದಲ್ಲೇ ಉಳಿಯುವಂತೆ ಮನವೊಲಿಕೆ ಪ್ರಯತ್ನ ಮಾಡುತ್ತೇನೆ ಎಂದರು.
ಪಕ್ಷದಲ್ಲಿ ಹಿರಿಯರ ಕಡೆಗಣನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಲ್ಲಿ ದ್ವಿತೀಯ ಹಂತದ ನಾಯಕರು ಬೆಳೆದರೇ ತಪ್ಪೇನು?. ಇದು ಪಕ್ಷದ ಹೈಕಮಾಂಡ್ ನಿರ್ಧಾರ. ಅದಕ್ಕೆ ವೈಯಕ್ತಿಕವಾಗಿ ಬದ್ದವಾಗಿದ್ದೇನೆ. ಇಬ್ರಾಹಿಂ ಅವರ ಜೊತೆ ಮಾತನಾಡುತ್ತೇನೆ. ಆ ಬಳಿಕ ಎಲ್ಲವನ್ನೂ ಹೇಳುತ್ತೇನೆ ಎಂದು ಅವರು ಹೇಳಿದರು.