ಧಾರವಾಡ: ವೈದ್ಯಕೀಯ ಶಿಕ್ಷಣ ಪಡೆಯಲು ಧಾರವಾಡದಿಂದ ಉಕ್ರೇನ್ಗೆ ಹೋಗಿದ್ದ ಧಾರವಾಡ ಮೆಹಬೂಬ್ ನಗರದ ಫೌಜಿಯಾ ಮುಲ್ಲಾ ಅವರು ಉಕ್ರೇನ್ ದೇಶ ಬಿಟ್ಟು ಇದೀಗ ರೊಮೇನಿಯಾ ದೇಶಕ್ಕೆ ಸುರಕ್ಷಿತವಾಗಿ ಬಂದು ತಲುಪಿದ್ದಾರೆ.
ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಯುದ್ಧ ನಡೆಯುತ್ತಿರುವುದರಿಂದ ಫೌಜಿಯಾ ಮುಲ್ಲಾ ಅತಂತ್ರರಾಗಿದ್ದಾರೆ. ಇದೀಗ ಭಾರತದ ಅನೇಕ ಜನ ವಿದ್ಯಾರ್ಥಿಗಳನ್ನು ಉಕ್ರೇನ್ ದೇಶದಿಂದ ರೊಮೇನಿಯಾ ದೇಶಕ್ಕೆ ತಂದು ಬಿಡಲಾಗುತ್ತಿದೆ. ಫೌಜಿಯಾ ಕೂಡ ಆ ವಿದ್ಯಾರ್ಥಿಗಳೊಂದಿಗೆ ರೊಮೇನಿಯಾ ದೇಶಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರ.. ನವೀನ್ ಪಾರ್ಥಿವ ಶರೀರ ತರುವ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದೇನು?
ಇಂದು ಬೆಳಗ್ಗೆ ಉಕ್ರೇನ್‌ನಲ್ಲಿದ್ದ ಭಾರತ ವಿದ್ಯಾರ್ಥಿಗಳನ್ನು ಉಕ್ರೇನ್ ಗಡಿ ಭಾಗಕ್ಕೆ ತಂದು ಬಿಡಲಾಗಿದೆ. ಈ ದೇಶಕ್ಕೆ ಬರಲು ಮೂರು ದಿನಗಳು ತಲುಗಿದೆ. ಗಡಿಯಲ್ಲಿ 20 ಕಿಲೋ ಮೀಟರ್ ದೂರ ನಡೆದುಕೊಂಡೇ ವಿದ್ಯಾರ್ಥಿಗಳು ರೊಮೇನಿಯಾ ದೇಶಕ್ಕೆ ಬಂದು ತಲುಪಿದ್ದಾರೆ. ಈ ಬಗ್ಗೆ ವಿಡಿಯೋ ಕಾಲ್ ಮುಖಾಂತರ ಫೌಜಿಯಾ ತಮ್ಮೊಂದಿಗೆ ಮಾತನಾಡಿ ತಿಳಿಸಿದ್ದಾರೆ ಎಂದು ಫೌಜಿಯಾ ತಂದೆ ಮಹ್ಮದ್ ಇಸಾಕ್ ಮುಲ್ಲಾ ಹೇಳಿದ್ದಾರೆ.