ಹುಬ್ಬಳ್ಳಿ : ಸಚಿವ ಸಿ ಪಿ ಯೋಗೇಶ್ವರ್ ಯಾವ ಪರೀಕ್ಷೆ ಬರೆದಿದ್ದಾರೆ ಅಂತ ಅವರನ್ನೇ ಕೇಳಿ.. ಅವರು ಯಾವ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಬರೆದಿದ್ದಾರೋ ಅಲ್ಲಿಂದಲೇ ಫಲಿತಾಂಶ ಸಿಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
‘ಫಡ್ನವಿಸ್ ಭೇಟಿ ಬಗ್ಗೆ ಗೊತ್ತಿಲ್ಲ’
ನಗರದಲ್ಲಿ ಮಾತಾನಾಡಿದ ಅವರು, ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರು ಯಾವ ವಿಚಾರವಾಗಿ ದೇವೇಂದ್ರ ಫಡ್ನವಿಸ್ ಅವರನ್ನ ಭೇಟಿ ಮಾಡಿದ್ದಾರೋ ಗೊತ್ತಿಲ್ಲ, ಭೇಟಿ ಮಾಡೋದು ತಪ್ಪಲ್ಲ ಎಂದು ಸಮಜಾಯಿಷಿ ಕೊಟ್ಟರು.
‘ಕೇಂದ್ರ ಗೃಹ ಸಚಿವರಿಗೆ ವಸ್ತುಸ್ಥಿತಿ ಮನವರಿಕೆ’
ಕೇರಳದಲ್ಲಿ ಕನ್ನಡದ ಊರುಗಳ ಹೆಸರು ಬದಲಾಯಿಸುವ ವಿಚಾರವಾಗಿ ಸಂಬಂಧಿಸಿದಂತೆ, ಕೇಂದ್ರ ಗೃಹ ಸಚಿವರಿಗೆ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡುತ್ತೇವೆ. ಸೂಕ್ತ ಸೂಚನೆ ನೀಡಲು ತಿಳಿಸುತ್ತೇವೆ ಎಂದರು.
ಗಡಿ ಭಾಗದಲ್ಲಿ ಕಟ್ಟೆಚ್ಚರ
ಮಹಾರಾಷ್ಟ್ರದಲ್ಲಿ ಡೆಲ್ಟಾ ವೈರಸ್ ವಿಪರೀತವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಕೈಗೊಳ್ಳಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ತಿಳಿಸುತ್ತೇವೆ.
ರಾಜ್ಯ ಬಿಜೆಪಿ ಘಟಕಕ್ಕೆ ಬೆಂಬಲ
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ರಾಜ್ಯದವರಿಗೆ ಆದ್ಯತೆ ನೀಡುವಂತೆ ಬಿಜೆಪಿ ರಾಜ್ಯ ಘಟಕ ಪ್ರಸ್ತಾಪವಿಟ್ಟರೆ ನಾನು ಬೆಂಬಲಿಸುತ್ತೇನೆ ಎಂದರು
ಲಸಿಕಾಕರಣ ಚುರುಕು
ಮುಂದಿನ ಒಂದು ವಾರದಲ್ಲಿ ಲಸಿಕಾಕರಣ ಇನ್ನಷ್ಟು ತೀವ್ರಗತಿಯಲ್ಲಿ ನಡೆಯಲಿದೆ. ಜುಲೈ 10ರ ವೇಳೆಗೆ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಆಗಲಿದೆ ಎಂದರು.
ಇದನ್ನೂ ಓದಿ:'ಕೇಂದ್ರ ಸಚಿವ ಸ್ಥಾನದ ಬಗ್ಗೆ ತಿಳಿದಿಲ್ಲ, ಹಾನಗಲ್ನಲ್ಲಿ ವಿಜಯೇಂದ್ರ ಸ್ಪರ್ಧೆ ತೀರ್ಮಾನವಾಗಿಲ್ಲ'