ಕಲಘಟಗಿ (ಧಾರವಾಡ): ತಾಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗುತ್ತಿಗೆ ಆಯುಷ್ ವೈದ್ಯರು, ಸೇವಾ ಭದ್ರತೆಗೆ ಒತ್ತಾಯಿಸಿ ರಾಜೀನಾಮೆ ನೀಡಿ ಸೇವೆ ಸ್ಥಗಿತ ಮಾಡಿದ್ದಾರೆ. ಇದರಿಂದ ಗ್ರಾಮೀಣ ರೋಗಿಗಳು ಪರದಾಡುವಂತಾಗಿದೆ.
ತಾಲೂಕಿನ ಮುಕ್ಕಲ, ಗಂಜಿಗಟ್ಟಿ, ಕಲಘಟಗಿ, ಬಮ್ಮಿಗಟ್ಟಿ, ಗಳಗಿ ಹುಲಕೊಪ್ಪ, ತಬಕದಹೊನ್ನಿಹಳ್ಳಿ, ಮಿಶ್ರಿಕೋಟಿ, ದುಮ್ಮವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಯುಷ್ ವೈದ್ಯರು ಸೇವೆ ನಿಲ್ಲಿಸಿದ್ದು, ಗ್ರಾಮೀಣ ಬಡ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೇ ದೂರದ ಕಲಘಟಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಹೋಗಬೇಕಿದೆ.
ಕೋವಿಡ್ ಸಮಯದಲ್ಲಿ ವೈದ್ಯರಿಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ತೊಂದರೆಯಾಗಿದೆ. ಸರಕಾರ ಶೀಘ್ರವೇ ಆಯುಷ್ ವೈದ್ಯರ ಬೇಡಿಕೆ ಈಡೇರಿಸಿ ಸೇವೆಗೆ ಅನುಕೂಲ ಮಾಡಿದಲ್ಲಿ ಸಹಕಾರಿಯಾಗಲಿದೆ ಎಂದು ಮುಕ್ಕಲ ಗ್ರಾ.ಪಂ. ಸದಸ್ಯ ಸುಭಾಸಗೌಡ ಪಾಟೀಲ್ ಆಗ್ರಹಿಸಿದ್ದಾರೆ.