ಧಾರವಾಡ: ಇಲ್ಲಿನ ಎಸ್ಡಿಎಂ ಮಂಜುನಾಥೇಶ್ವರ ದಂತ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 29ನೇ ಘಟಿಕೋತ್ಸವದಲ್ಲಿ ಬಿಡಿಎಸ್ ಪದವಿ ವಿಭಾಗದ ರಶ್ಮೀತಾ 6 ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಮೂಡಬಿದಿರೆ ಮೂಲದ ರಶ್ಮೀತಾ ಸೇರಿದಂತೆ 14 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಡಾ. ವೀರೇಂದ್ರ ಹೆಗ್ಗಡೆ, ವಿದ್ಯಾರ್ಥಿಗಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದರು.
ಘಟಿಕೋತ್ಸವದಲ್ಲಿ 90 ವಿದ್ಯಾರ್ಥಿಗಳಿಗೆ ಪದವಿ ಹಾಗೂ 43 ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಪದವಿ ಪ್ರದಾನ ಮಾಡಲಾಯಿತು.
ಭವಿಷ್ಯದಲ್ಲಿ ಉನ್ನತ ವ್ಯಾಸಂಗದ ಜತೆಗೆ ದೇಶದಲ್ಲಿಯೇ ಉನ್ನತಮಟ್ಟದ ದಂತ ವೈದ್ಯರಾಗುವ ಇಚ್ಛೆಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು.