ಧಾರವಾಡ: ಜಿಲ್ಲೆಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಇದರಿಂದ ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ.
ಧಾರವಾಡ-ಬೆಳಗಾವಿ ಗಡಿಭಾಗದಲ್ಲಿರುವ ಈ ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿಯುತ್ತಿದೆ. ತುಂಬಿ ಹರಿಯುತ್ತಿರುವ ಹಳ್ಳದ ಮೇಲೆ ಬೈಕ್ ಸವಾರರು ದುಸ್ಸಾಹಸ ಮೆರೆಯುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಶಾಂತವಾಗಿತ್ತು. ಇದೀಗ ಮತ್ತೆ ನಿನ್ನೆಯಿಂದ ವರುಣನ ಅರ್ಭಟ ಮುಂದುವರೆದಿದೆ. ರಾತ್ರಿಯಿಡೀ ಎಡೆಬಿಡದೆ ಮಳೆ ಸುರಿದಿದೆ.