ಹುಬ್ಬಳ್ಳಿ: ಬಿಸಿಲಿನಿಂದ ಹೈರಾಣಾಗಿದ್ದ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನಕ್ಕೆ ಗುರುವಾರ ಸಂಜೆ ಸುರಿದ ಮಳೆ ತಂಪೆರೆದಿದೆ.
ನಿನ್ನೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆಯಾದ ಪರಿಣಾಮ ಕಾದು ಕೆಂಡವಾಗಿದ್ದ ಭೂಮಿ ತಂಪಾಗಿದೆ. ಈ ಮೂಲಕ ಪ್ರಸಕ್ತ ವರ್ಷದ ಮಳೆ ಆರಂಭವಾಗಿದ್ದು, ರೈತರ ಮೊಗದಲ್ಲೂ ಮಂದಹಾಸ ಮೂಡಿಸಿದೆ.
ಹುಬ್ಬಳ್ಳಿಯ ದುರ್ಗದಬೈಲ್, ಬಟರ್ ಮಾರ್ಕೆಟ್ ನಲ್ಲಿ ಅಂಗಡಿ ಮುಂಗಟ್ಟನಲ್ಲಿರುವ ವಸ್ತುಗಳು ಮಳೆ-ಗಾಳಿಯಿಂದ ಚಿಲ್ಲಾಪಿಲ್ಲಿಯಾಗಿದ್ದವು. ರಂಜಾನ್ ಹಬ್ಬಕ್ಕೆ ಬಟ್ಟೆ ಖರೀದಿಸಲು ಬಂದದಿದ್ದ ಗ್ರಾಹಕರು ಅನಿರೀಕ್ಷಿತ ಮಳೆಯಿಂದಾಗಿ ಪರದಾಡುವಂತಾಯಿತು.