ETV Bharat / state

RT-PCR Report ಇಲ್ಲದೆ ಬಂದವರಿಗೆ ಹುಬ್ಬಳ್ಳಿಯಲ್ಲಿ ಕ್ವಾರಂಟೈನ್ - ಗಡಿಯಲ್ಲಿ ತಪಾಸಣೆ

RT-PCR ವರದಿ ಇಲ್ಲದೆ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಮಹಾರಾಷ್ಟ್ರದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ.

Quarantine for Inter state Passengers
ಹುಬ್ಬಳ್ಳಿಯಲ್ಲಿ ಕ್ವಾರಂಟೈನ್
author img

By

Published : Aug 8, 2021, 1:08 PM IST

ಹುಬ್ಬಳ್ಳಿ : ಆಗಸ್ಟ್ 7 ರಂದು ಆರ್​ಟಿಪಿಸಿಆರ್ ವರದಿ (RT-PCR Report) ಇಲ್ಲದೆ ಮಹಾರಾಷ್ಟ್ರದಿಂದ ಬಸ್​ ಮೂಲಕ ನಗರಕ್ಕೆ ಆಗಮಿಸಿದ 10 ಜನರ ಪೈಕಿ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ.

ಬಸ್​ ಮೂಲಕ ಆಗಮಿಸಿದ 10 ಜನರಲ್ಲಿ ಆರ್​ಟಿಪಿಆರ್ ವರದಿ ಇರಲಿಲ್ಲ. ಈ ಪೈಕಿ 8 ಜನರಿಗೆ ವೈದ್ಯಕೀಯ ಕಾರಣಗಳನ್ನು ನೀಡಿದ್ದರು. ಹಾಗಾಗಿ, ಅವರ ದಾಖಲೆ ಪರಿಶೀಲಿಸಿ ಸ್ಥಳದಲ್ಲೇ ತಪಾಸಣೆ ಮಾಡಿ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇನ್ನುಳಿದ ಇಬ್ಬರನ್ನು ನಗರದ ಅಂಜುಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಓದಿ : ಕೇರಳ ಅಷ್ಟೇ ಅಲ್ಲ, ತಮಿಳುನಾಡಿನಿಂದ ಬರಲು ಬೇಕು ಕೊರೊನಾ ನೆಗೆಟಿವ್ ರಿಪೋರ್ಟ್​

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆ , ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಸಹ ಈ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿದ ಆರ್​​ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತರುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ಈ ಹಿನ್ನೆಲೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆರ್​ಟಿಪಿಸಿಆರ್ ವರದಿ ಇಲ್ಲದೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.