ಹುಬ್ಬಳ್ಳಿ : ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಬಿ ಜೆ ಪುಟ್ಟಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಆಡಳಿತದಿಂದ ಶಾಸಕರು ಬೇಸತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಗೆ ಬರಲು ಕ್ಯೂ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ 6 ಜನ ಶಾಸಕರಿದ್ದಾರೆ. 23ರ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ ಎಂದರು.
ಇನ್ನು ಸಿಎಂ ವಿರುದ್ಧವೂ ವಾಗ್ದಾಳಿ ನಡೆಸಿದ ಪುಟ್ಟಸ್ವಾಮಿ, ರಾಜ್ಯದ ಜನರ ಹಿತಕ್ಕಿಂತ ಕುಮಾರಸ್ವಾಮಿಗೆ ಕುಟುಂಬದವರ ಸೋಲು-ಗೆಲುವಿನ ವಿಷಯವೇ ಮುಖ್ಯವಾಗಿದೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದರೆ, ಸಿಎಂ ಸ್ವಹಿತಾಸಕ್ತಿ ಬಗ್ಗೆ ವಿಚಾರ ಮಾಡ್ತಿದ್ದಾರೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ನಾಯಕರ ಕಚ್ಚಾಟ ತಾರಕಕ್ಕೇರಿದೆ ಎಂದು ಆರೋಪಿಸಿದರು.