ETV Bharat / state

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಹೊರಟ್ಟಿ ಅವರ ನೇತೃತ್ವದಲ್ಲಿ ಸತ್ಯಾಗ್ರಹ.. ನಿಜಗುಣಾನಂದ ಶ್ರೀ ಬೆಂಬಲ - nijagunananda swamiji

ಸರ್ಕಾರ ಆದಷ್ಟು ಬೇಗ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು.‌ ಸತ್ಯಾಗ್ರಹ ಉಗ್ರ ಸ್ವರೂಪ ತಾಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು..

protest in darwad to solve teachers problem
ಧಾರವಾಡದಲ್ಲಿ ಮುಂದುವರೆದ ಉಪವಾಸ ಸತ್ಯಾಗ್ರಹ....‌ಬೆಂಬಲ ವ್ಯಕ್ತಪಡಿಸಿದ ನಿಜಗುಣಾನಂದ ಸ್ವಾಮೀಜಿ
author img

By

Published : Dec 6, 2020, 1:41 PM IST

ಧಾರವಾಡ : ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸತ್ಯಾಗ್ರಹಕ್ಕೆ ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿ ಕೂಡ ‌ಬೆಂಬಲ ವ್ಯಕ್ತಪಡಿಸಿದ್ದಾರೆ.

ಸತ್ಯಾಗ್ರಹಕ್ಕೆ ‌ಬೆಂಬಲ ವ್ಯಕ್ತಪಡಿಸಿದ ನಿಜಗುಣಾನಂದ ಸ್ವಾಮೀಜಿ..

ಧಾರವಾಡದ ಜಿಲ್ಲಾಧಿಕಾರಿ ‌ಕಚೇರಿ ಎದುರು, ಶಿಕ್ಷಕರ ವಿವಿಧ ಬೇಡಿಕೆಗೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಿನ್ನೆಯಿಂದ ಉಪವಾಸ ಸತ್ಯಾಗ್ರಹ‌ ಹಮ್ಮಿಕೊಂಡಿದ್ದಾರೆ. ಇಂದು ಸಹ ಅನೇಕ‌ ಶಿಕ್ಷಕರು ಕೈಜೋಡಿಸಿ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗೆಹರಿಸದಿದ್ದರೆ ಅಮರಣಾಂತ ಉಪವಾಸ: ಹೊರಟ್ಟಿ

ಸತ್ಯಾಗ್ರಹ ಸ್ಥಳಕ್ಕೆ ಧಾವಿಸಿ ಬೆಂಬಲ ವ್ಯಕ್ತಪಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ, ಸರ್ಕಾರ ಆದಷ್ಟು ಬೇಗ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು.‌ ಸತ್ಯಾಗ್ರಹ ಉಗ್ರ ಸ್ವರೂಪ ತಾಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.