ಹುಬ್ಬಳ್ಳಿ : ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮೀರ್, ಬಾಸಿತ್, ತಾಲಿಬ್ ಅವರ ಕುಟುಂಬಸ್ಥರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.
ಹುಬ್ಬಳ್ಳಿಯ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ಕುಟುಂಬಸ್ಥರು ಘಟನೆಯ ಬಗ್ಗೆ ನವನಗರದಲ್ಲಿರುವ ಹು-ಧಾ ಕಮಿಷನರ್ ಕಚೇರಿಗೆ ಆಗಮಿಸಿ, ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದುಕೊಂಡರು.
ಪೊಲೀಸರು ತಮ್ಮ ವಾಹನದಲ್ಲಿಯೇ ಆರೋಪಿಗಳ ಸಂಬಂಧಿಗಳನ್ನು ಬೆಳಗಾವಿ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಪ್ರಕರಣ ವರ್ಗಾವಣೆ :
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಆರ್.ದಿಲೀಪ್, ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ಈ ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ವಿಡಿಯೋವನ್ನು ಕುಂದಗೋಳ ಕ್ರಾಸ್ನ ಕೆಎಲ್ಇ ಹಾಸ್ಟೆಲ್ನಲ್ಲಿ ಚಿತ್ರಿಕರಿಸಲಾಗಿದೆ. ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರ ವಿಚಾರವಾಗಿ, ಬಾಂಡ್ ಬಗ್ಗೆ ನಾನು ಈ ಸಮಯದಲ್ಲಿ ಮಾತನಾಡುವದಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿದೆ. ಈ ವೇಳೆ ನಾನೇನು ಮಾತನಾಡುವದಿಲ್ಲ ಎಂದರು.
ಸೆಕ್ಷನ್ 124A ಅಡಿ ಪ್ರಕರಣದ ದಾಖಾಲಾಗಿದ್ದರು, ಬಾಂಡ್ ಮೇಲೆ ಹೊರ ಬಿಟ್ಟಿದ್ದಕ್ಕೆ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಲಿಲ್ಲ.