ETV Bharat / state

ಪಾಕ್​ ಪರ ಘೋಷಣೆ ಪ್ರಕರಣ: ಆರೋಪಿಗಳಿಗೆ ಮತ್ತೆ ನ್ಯಾಯಾಂಗ ಬಂಧನ

author img

By

Published : Feb 17, 2020, 10:51 AM IST

ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ತನಿಖೆ ‌ಮುಂದುವರೆದಿದ್ದು, ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಹೇಳಿದ್ದಾರೆ.

Pro-pakistan proclamation case
ಪಾಕ್​ ಪರ ಘೋಷಣೆ ಪ್ರಕರಣ

ಹುಬ್ಬಳ್ಳಿ: ನಗರದ ‌ಕೆಎಲ್ಇ‌‌ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿ‌ದ ಮೂವರು ಎಂಜಿನಿಯರಿಂಗ್ ‌ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ‌.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಭಾನುವಾರ ಸಿಆರ್​ಪಿಸಿ 169 ಬಾಂಡ್ ಮೇಲೆ ಗೋಕುಲ್ ರೋಡ್ ಠಾಣೆ ಪೊಲೀಸರು ಬಿಡುಗಡೆ ಮಾಡಿದ್ದರು‌. ಇದನ್ನು ಖಂಡಿಸಿ ಭಾನುವಾರ ರಾತ್ರಿ ಭಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಗೋಕುಲ್ ರೋಡ್​ ಠಾಣೆ ಎದುರು ಪ್ರತಿಭಟನೆ ನಡೆಸಿ ಪೊಲೀಸ್ ಕಮೀಷನರ್​ಗೆ ಮುತ್ತಿಗೆ ಹಾಕಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು.

ಪರಿಸ್ಥಿತಿ ಕೈಮೀರಿರುವುದನ್ನು ಅರಿತು ರಾತ್ರೋರಾತ್ರಿ ಮತ್ತೆ ಕಾಶ್ಮೀರಿ ಮೂಲದ ಅಮಿರ್​, ಬಾಸಿತ್, ತಾಲಿಬ್ ಈ ಮೂವರನ್ನ ಮತ್ತೆ ಬಂಧಿಸಿ ನಿನ್ನೆ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆಂದು ಹು- ಧಾ ಪೊಲೀಸ್ ಆರ್.ದಿಲೀಪ್ ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.